ಉಡುಪಿಯ ಅತ್ತೂರು ಚರ್ಚ್ ನಿಂದ ಸುಪ್ರೀಂ ಕೋರ್ಟ್ ನ ಆದೇಶವನ್ನು ಗಾಳಿಗೆ ತೂರಿ ರಸ್ತೆಯಲ್ಲಿ ಕಮಾನು ನಿರ್ಮಾಣ !

ಅತ್ತೂರು (ಉಡುಪಿ) – ಸರ್ವೋಚ್ಚ ನ್ಯಾಯಾಲಯದ ಆದೇಶಾನುಸಾರ ಹೆದ್ದಾರಿ ಅಗಲೀಕರಣಕ್ಕಾಗಿ, ಉಡುಪಿ ಜಿಲ್ಲೆಯ ಕಮಾನುಗಳನ್ನು ತೆಗೆಯುತ್ತಿರುವಾಗ ಅತ್ತೂರಿನ ಸೇಂಟ್ ಲಾರೆನ್ಸ್ ಚರ್ಚ್‌ನ ಕಮಾನು ಮಾತ್ರ ಹಾಗೆಯೇ ಉಳಿಯಿತು. ಚರ್ಚ ತನ್ನ ಹಳೆಯ ಕಮಾನಿಗೆ ಬದಲಾಗಿ ಈಗ ಕಬ್ಬಿಣದ ದೊಡ್ಡ ಕಮಾನು ನಿಲ್ಲಿಸಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ.

ಅಧಿಕಾರಿಗಳಿಂದ ಯಾವುದೇ ಕ್ರಮವಿಲ್ಲ!

ಲೋಕೋಪಯೋಗಿ ಇಲಾಖೆ ಹೊಸ ಕಮಾನು ನಿರ್ಮಿಸಿದೆ. ಈ ಅನಧಿಕೃತ ನಿರ್ಮಾಣದಿಂದ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ವಿಷಯದಲ್ಲಿ ದೂರು ದಾಖಲಿಸಲಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕೈಚೆಲ್ಲಿದ್ದಾರೆ. ಈಗ ‘ಹಿಂದೂ ಜಾಗರಣ ವೇದಿಕೆ’ ಈ ಹಿಂದುತ್ವನಿಷ್ಠ ಸಂಘಟನೆಯಿಂದ ಈ ಅನಧಿಕೃತ ಕಮಾನಿನ ವಿರುದ್ಧ ಹೋರಾಟ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ಇತ್ತೀಚೆಗೆ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೂಗಾಡುವವರು ಈಗ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು !