Bengal Woman Suicide : ಬಂಗಾಳ: ವಿವಾಹೇತರ ಸಂಬಂಧದ ಸಂಶಯದ ಮೇಲೆ ಮಹಿಳೆಯೊಬ್ಬಳಿಗೆ ಥಳಿತ; ಮಹಿಳೆಯ ಆತ್ಮಹತ್ಯೆ

ತೃಣಮೂಲ ಕಾಂಗ್ರೆಸ್ ಮುಖಂಡನ ಮೇಲೆ ಆರೋಪ

ಕೋಲಕಾತಾ (ಬಂಗಾಳ) – ಬಂಗಾಳದ ದಕ್ಷಿಣ ದಿನಾಜ್‌ಪುರದಲ್ಲಿ ಕೆಲವು ದಿನಗಳ ಹಿಂದೆ, ವಿವಾಹಿತ ಮುಸ್ಲಿಂ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ಪದಾಧಿಕಾರಿ ತಾಜಮೂಲ ಇಸ್ಲಾಂ ನಡುರಸ್ತೆಯಲ್ಲಿ ಅಮಾನುಷವಾಗಿ ಥಳಿಸಿದ್ದರು. ಈ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ಬಂಗಾಳದಲ್ಲಿ ಇಂತಹ ಇನ್ನೊಂದು ಘಟನೆ ನಡೆದಿರುವುದು ಬಹಿರಂಗವಾಗಿದೆ. ಬಂಗಾಳದ ಜಲ್ಪೈಗುಡಿ ಜಿಲ್ಲೆಯ ಫುಲಬಾರಿ ಗ್ರಾಮದಲ್ಲಿ ಜೂನ್ 29 ರಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಮಹಿಳೆಯು ವಿವಾಹೇತರ ಸಂಬಂಧವನ್ನು ಹೊಂದಿದ್ದಾಳೆಂದು ಆರೋಪಿಸಿ ಅವಳನ್ನು ಬಹಿರಂಗವಾಗಿ ಥಳಿಸಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸಮಾಜದ ಜನರು ಥಳಿಸಿದ ಬಳಿಕ ಮಾನಸಿಕ ಹಿಂಸೆ ಅನುಭವಿಸಿದ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಲಾಗುತ್ತಿದೆ. ಈ ಪ್ರಕರಣದಲ್ಲಿ 4 ಜನರನ್ನು ಬಂಧಿಸಲಾಗಿದೆ.

1. ನನ್ನ ಪತ್ನಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಪತಿ ಹೇಳಿದ್ದಾರೆ. ಕೆಲವು ಗ್ರಾಮಸ್ಥರು ಅವಳನ್ನು ಪಂಚಾಯತಿಯ ಎದುರು ಥಳಿಸಿದ್ದರು. ನಾನು ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ. ನನ್ನ ಹೆಂಡತಿಗೆ ಗ್ರಾಮದ ಮಹಿಳೆಯರು ಪಂಚಾಯತಿಯ ಎದುರು ಥಳಿಸಿರುವ ಆಘಾತವನ್ನು ಆಕೆಗೆ ಸಹಿಸಲು ಆಗಲಿಲ್ಲ. ಆ ಒತ್ತಡದಿಂದ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾನು ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

2. ಆ ಮಹಿಳೆಗೆ ಗ್ರಾಮದ ಓರ್ವ ಯುವಕನೊಂದಿಗೆ ವಿವಾಹೇತರ ಸಂಬಂಧವಿತ್ತು ಎಂದು ಆರೋಪಿಸಲಾಗುತ್ತಿದೆ. ಕಳೆದ 10 ದಿನಗಳಿಂದ ಅವಳು ನಾಪತ್ತೆಯಾಗಿದ್ದಳು. ಆಕೆಯ ಪತಿಯೇ ಅವಳು ನಾಪತ್ತೆಯಾಗಿದ್ದಾಳೆಂದು ದೂರು ದಾಖಲಿಸಿದ್ದನು. ಜೂನ್ 29 ರಂದು ಮಹಿಳೆ ಅಡಗಿದ್ದ ಸ್ಥಳ ಪತ್ತೆಯಾಗಿತ್ತು ಮತ್ತು ಅವಳನ್ನು ಮರಳಿ ಗ್ರಾಮಕ್ಕೆ ಕರೆಸಲಾಗಿತ್ತು.

3.ಅವಳ ಪತಿಯು ಪ್ರಕಾರ, ನನ್ನ ಪತ್ನಿ ಗ್ರಾಮಕ್ಕೆ ಮರಳಿದ ಬಳಿಕ ಅವಳ ಗ್ರಾಮ ಪಂಚಾಯತ ಮುಖಂಡರು ಕರೆಸಿದರು. ಅಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಖಂಡೆ ಮಾಲತಿ ರಾಯ ಮತ್ತು ಅವಳ ಪತಿ ಶಂಕರ ರಾಯ ಕೂಡ ಇದ್ದರು. ನಾವು ಅಲ್ಲಿಗೆ ತಲುಪಿದಾಗ ಅವರ ಕಾರ್ಯಕರ್ತರು ನಮ್ಮಿಬ್ಬರನ್ನು ಥಳಿಸಲು ಪ್ರಾರಂಭಿಸಿದರು ಎಂದರು.

4.ಮಾಲತಿ ರಾಯ ಮತ್ತು ಶಂಕರ ರಾಯ ಇವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಶಂಕರ ರಾಯ ಮಾತನಾಡಿ, ನಾವು ಪೊಲೀಸರಲ್ಲಿ ದೂರು ದಾಖಲಿಸುವವರಿದ್ದೆವು. ಆದರೆ ಅದರ ಬದಲಾಗಿ ನಾವು ಪಂಚಾಯತಿಗೆ ಬಂದೆವು. ಮಹಿಳೆಯು ಈ ಹಿಂದೆಯೂ ಒಮ್ಮೆ ಓರ್ವ ಯುವಕನೊಂದಿಗೆ ಓಡಿ ಹೋಗಿದ್ದಳು. ಇದಕ್ಕಾಗಿಯೇ ಅವರ ಅಕ್ಕ-ಪಕ್ಕದವರು ಈ ಮಹಿಳೆಯನ್ನು ಕರೆಸಿ ಥಳಿಸಿರಬೇಕು. ನಾವು ಅಲ್ಲಿ ಉಪಸ್ಥಿತರಿರಲಿಲ್ಲ. ನಾನು ಅಲ್ಲಿಗೆ ತಲುಪಿದಾಗ, ಅಲ್ಲಿ ಸಭೆ ನಡೆದಿತ್ತು. ಆಗ ಮಹಿಳೆಯು ಶೌಚಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದಳು. ಸ್ವಲ್ಪ ಸಮಯದ ಬಳಿಕ ನಮಗೆ ಆ ಮಹಿಳೆಯು ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ತಿಳಿದು ಬಂದಿತು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಆವಶ್ಯಕತೆಯಿದೆಯೆಂದು ಇಂತಹ ಪ್ರಕರಣಗಳಿಂದ ಪ್ರತಿದಿನ ಗಮನಕ್ಕೆ ಬರುತ್ತಿರುವಾಗ ಆ ಬಗ್ಗೆ ನಿಷ್ಕ್ರಿಯರಾಗಿರುವ ರಾಜಕಾರಣಿಗಳು ಜನತಾದ್ರೋಹಿಗಳೇ ಆಗಿದ್ದಾರೆ.