‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ 24 ರಿಂದ 30 ಜೂನ್ ಈ ಅವಧಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಇದು ಅತ್ಯಂತ ಆನಂದದ ವಿಷಯವಾಗಿದೆ. ಇದಕ್ಕಾಗಿ 5 ರಾಷ್ಟ್ರಗಳಿಂದ ಹಿಂದೂಗಳ ಪ್ರಮುಖರು ಸಹಭಾಗಿ ಆಗುವವರಿದ್ದಾರೆ. ಈ ಅಧಿವೇಶನದ ಮೂಲಕ ಎಲ್ಲಾ ದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಬಗ್ಗೆ ಪ್ರೀತಿ ಹೆಚ್ಚಾಗಲಿ, ಅದರಲ್ಲಿ ಹೊಸ ತಲೆಮಾರು ಸೇರಲಿ ಮತ್ತು ನಮ್ಮ ದೇಶದ ಬಗ್ಗೆ ಗೌರವ ಉಂಟಾಗಲಿ. ಪ್ರಭು ಶ್ರೀರಾಮನು ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ಅರ್ಥ: ತಾಯಿ ಮತ್ತು ಜನ್ಮಭೂಮಿ ನನಗೆ ಸ್ವರ್ಗಕ್ಕಿಂತಲೂ ಮಹತ್ತರವೆನಿಸುತ್ತದೆ), ಎಂದಿದ್ದಾರೆ. ಇದರಿಂದ ಪ್ರಭು ಶ್ರೀರಾಮನು ತಮ್ಮ ಜನ್ಮಭೂಮಿಯ ಬಗ್ಗೆ ಎಷ್ಟು ಪ್ರೀತಿ ಹೊಂದಿದ್ದರು, ಎಂಬುದನ್ನು ಕಲಿಸಿದರು. ‘ಸರ್ವೇಅತ್ರ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ’ (ಅರ್ಥ: ಎಲ್ಲಾ ಜೀವಿಗಳು ಸುಖವಾಗಿರಲಿ. ಎಲ್ಲರಿಗೂ ಉತ್ತಮ ಆರೋಗ್ಯ ದೊರಕಲಿ), ಇದು ಹಿಂದೂ ಸಂಸ್ಕೃತಿಯ ಧ್ಯೇಯವಾಗಿದೆ. ನಾವು ಕೇವಲ ಹಿಂದೂಗಳಿಗೆ ಒಳಿತು ಆಗಬೇಕು ಎಂದು ಹೇಳುವುದಿಲ್ಲ. ‘ವಸುಧೈವ ಕುಟುಂಬಕಂ’ (ಅರ್ಥ: ಸಂಪೂರ್ಣ ಭೂಮಿಯೇ ನಮ್ಮ ಕುಟುಂಬ) ಇದು ನಮ್ಮ ಧ್ಯೇಯವಾಗಿದೆ. ಈ ಅಧಿವೇಶನದ ಮೂಲಕ ಎಲ್ಲೆಡೆ ಸುಖ-ಸಮಾಧಾನ ಹೆಚ್ಚಾಗಲಿ ಮತ್ತು ಯೋಜನೆ ರೂಪಿಸಲ್ಪಡಲಿ, ಅಂತೆಯೇ ಈ ಮಹೋತ್ಸವಕ್ಕೆ ನಮ್ಮ ಹಾರೈಕೆ ಇದೆ. ಭಗವಾನ್ ಶಿವ, ರಾಮಜೀ ಮತ್ತು ಶ್ರೀಕೃಷ್ಣರ ಅನುಗ್ರಹ ಯಾವಾಗಲೂ ಇರುತ್ತಿರಲಿ.’ ಎಂದು ಆಶಿರ್ವಾಧಿಸಿದರು.