ರಾಂಚಿ (ಜಾರ್ಖಂಡ್) – ಆಂಚಲ್ ಭೂ ಹಗರಣದ ಪ್ರಕರಣದಲ್ಲಿ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಉಚ್ಚ ನ್ಯಾಯಾಲಯವು ಜಾಮೀನು ನೀಡಿದೆ.
ರಾಜ್ಯದಲ್ಲಿ ಸೇನೆಯ ವಶದಲ್ಲಿದ್ದ 4.55 ಎಕರೆ ಭೂಮಿಯನ್ನು ಅಕ್ರಮ ಖರೀದಿ ಮತ್ತು ಮಾರಾಟದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯವು (ಇಡಿ) ಪ್ರಾರಂಭಿಸಿದ ನಂತರ ಮೊದಲು ಕಂದಾಯ ಉಪನಿರೀಕ್ಷಕ ಭಾನು ಪ್ರತಾಪ್ ಪ್ರಸಾದ್ ಮತ್ತು ನಂತರ ಇತರೆ 13 ಜನರನ್ನು ಬಂಧಿಸಲಾಗಿತ್ತು. ಈ ಆರೋಪಿಗಳು ಸರ್ಕಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಭೂ ಮಾಫಿಯಾದ ಹೆಸರಿನಲ್ಲಿ ವಂಚನೆಮಾಡಿ ನಿವೇಶನಗಳನ್ನು ವರ್ಗಾವಣೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆ ನಂತರ ಈ ಪ್ರಕರಣದಲ್ಲಿ ಹೇಮಂತ್ ಸೋರೆನ್ ಅವರನ್ನು ಬಂಧಿಸಲಾಗಿದ್ದು, ಅವರು ಜನವರಿ 31 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.