ಹತ್ಯೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರ ಬಂಧನ

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಮಿಯಾನ್ ಅಬ್ದುಲ್ ಖಯೂಮ್ ಭಟ್ ನನ್ನು ಬಂಧಿಸಲಾಗಿದೆ. ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ತಮ್ಮ ಪ್ರತಿಸ್ಪರ್ಧಿ ವಕೀಲ ಬಾಬರ್ ಖಾದ್ರಿಯನ್ನು ಕೊಂದ ಆರೋಪ ಭಟ್ ಮೇಲಿದೆ. ಖಾದ್ರಿಯನ್ನು ಕೊಂದ ಭಯೋತ್ಪಾದಕ ಸಾಕಿಬ್ ಮಂಜೂರ್ 2021 ರ ಆಗಸ್ಟ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ. ಮಿಯಾನ್ ಅಬ್ದುಲ್ ಕಯ್ಯೂಮ್ ಭಟ್ ತಮ್ಮ ಪ್ರತ್ಯೇಕತಾವಾದಿ ಚಟುವಟಿಕೆಗಳಿಗಾಗಿ ದೀರ್ಘಕಾಲ ಜೈಲಿನಲ್ಲಿದ್ದ.