Hindu Protest : ಛತ್ತೀಸಗಡ: ನಡುರಸ್ತೆಯಲ್ಲಿ ಕರುವಿನ ತಲೆ ಸಿಕ್ಕ ಬಳಿಕ ಹಿಂದೂ ಸಂಘಟನೆಗಳಿಂದ ಆಂದೋಲನ

  • ಪೊಲೀಸರಿಂದ ಲಾಠಿಚಾರ್ಜ್

  • ನಾಯಿಯೊಂದು ಕರುವಿನ ತಲೆ ತಂದು ಎಸೆದಿದೆ ಎಂದು ಪೊಲೀಸರ ಹೇಳಿಕೆ

ದುರ್ಗ (ಛತ್ತೀಸಗಡ) – ಕರುವಿನ ಛಿದ್ರಗೊಳಿಸಿದ ತಲೆ ಪತ್ತೆಯಾದ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ. ‘ಹಿಂದೂ ಯುವ ಮಂಚ’ ಮತ್ತು ‘ರಾಷ್ಟ್ರೀಯ ಬಜರಂಗದಳ’ದ ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು. ಅಲ್ಲದೆ ರಾತ್ರಿ ಪೋಲೀಸ್ ಠಾಣೆಗೂ ಮುತ್ತಿಗೆ ಹಾಕಿದರು. ಆಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಬಳಿಕ ನಡೆದ ಮಾರಾಮಾರಿಯಲ್ಲಿ ಓರ್ವ ಪೊಲೀಸ ಅಧೀಕ್ಷಕರು ಗಾಯಗೊಂಡರು. ಈ ಪ್ರಕರಣದ ಕುರಿತು ಪೊಲೀಸರು ಕರುವಿನ ತಲೆಯನ್ನು ನಾಯಿ ಅಲ್ಲಿಗೆ ತಂದಿತ್ತು ಎಂದು ಹೇಳಿದ್ದಾರೆ. ಈ ಬಗ್ಗೆ ಭಿಲಾಯಿ ಹಿರಿಯ ಪೊಲೀಸ್ ಅಧೀಕ್ಷಕ ಸುಖನಂದನ ರಾಥೋಡ ಅವರು ಮಾತನಾಡಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಕರುವಿನ ತಲೆಯನ್ನು ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

`ನಾಯಿಯೊಂದು ಕರುವಿನ ತಲೆ ತಂದು ಎಸೆದಿದೆ’, ಎಂದು ಹೇಳಿದರೂ ಕರುವಿನ ಹತ್ಯೆಯಾಗಿರುವುದು ಸತ್ಯವಾಗಿದ್ದು ಅದರ ತನಿಖೆ ಪೊಲೀಸರು ಯಾವಾಗ ಮಾಡುವರು? ಛತ್ತೀಸಗಡದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ.