ಮುಂದಿನ ಸಮಾವೇಶದವರೆಗೆ 1 ಸಾವಿರ ಹಳ್ಳಿಗಳಲ್ಲಿ ಹನುಮಾನ್ ಚಾಲೀಸಾ ಪಠಣ ಆರಂಭಿಸೋಣ ! – ಕಮಲೇಶ ಕಟಾರಿಯಾ, ಅಧ್ಯಕ್ಷರು, ಸಂಕಲ್ಪ ಹಿಂದೂ ರಾಷ್ಟ್ರ ಅಭಿಯಾನ, ಛತ್ರಪತಿ ಸಂಭಾಜಿನಗರ, ಮಹಾರಾಷ್ಟ್ರ

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ

ಕಮಲೇಶ ಕಟಾರಿಯಾ

ಭಜರಂಗಬಲಿ ಹನುಮಾನ್ ಧಾರ್ಮಿಕ ಸ್ಥಾಪನೆಗೆ ಶಕ್ತಿ ನೀಡುವ ದೇವರಾಗಿದ್ದಾರೆ. ಮಾರುತಿರಾಯನು ರಾವಣನನ್ನು ಕೊಲ್ಲಲು ಶ್ರೀರಾಮನಿಗೆ ಸಹಾಯ ಮಾಡಿದನು. ಮಹಾಭಾರತದಲ್ಲಿ, ಮಾರುತಿರಾಯ ಅರ್ಜುನನ ರಥದ ಮೇಲೆ ಸೂಕ್ಷ್ಮದಲ್ಲಿ ವಿರಾಜಮಾನರಾಗಿ ಕೌರವರನ್ನು ನಾಶಮಾಡಲು ಅರ್ಜುನನಿಗೆ ಶಕ್ತಿ ನೀಡಿದನು. ಅದೇ ರೀತಿ ಬಜರಂಗಬಲಿ ಹನುಮಾನ್ ಹಿಂದೂ ರಾಷ್ಟ್ರ ಸ್ಥಾಪನೆಗೆ ಶಕ್ತಿ ನೀಡುವನು. ಇದಕ್ಕಾಗಿ ಪ್ರತಿ ಶನಿವಾರದಂದು ಪ್ರತಿ ಗ್ರಾಮಗಳಲ್ಲಿ ಹಿಂದೂ ಯುವಕರು ಹನುಮಾನ್ ದೇವಸ್ಥಾನದಲ್ಲಿ ಸೇರಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಕಲ್ಪ ಮಾಡಬೇಕು.