Cyber Criminals Swindle 1.3 Cr : ಕೋರಿಯರ್ ಮೂಲಕ ಆಕ್ಷೇಪಾರ್ಹ ವಸ್ತುಗಳು ಬಂದಿವೆ ಎಂದು ಹೇಳಿ ವೃದ್ಧ ಮಹಿಳೆಗೆ ೧ ಕೋಟಿ ೩೦ ಲಕ್ಷ ರೂಪಾಯಿ ವಂಚನೆ !

ನೋಯ್ಡಾ (ಉತ್ತರ ಪ್ರದೇಶ) – ನೋಯ್ಡಾದಲ್ಲಿನ ೭೩ ವರ್ಷದ ಮಹಿಳೆಗೆ ಸತತ ೫ ದಿನ ಬ್ಲಾಕ್ ಮೇಲ್ ಮಾಡಿ ೧ ಕೋಟಿ ೩೦ ಲಕ್ಷ ರೂಪಾಯ ದೋಚಿದ್ದಾರೆ. ಅಪರಾಧಿಗಳು ಈ ಮಹಿಳೆಗೆ ವಿಡಿಯೋ ಕಾಲ್ ಮೂಲಕ ಆರ್ಥಿಕ ದುರ್ವ್ಯವಹಾರದಲ್ಲಿ ಆಕೆಯ ಸಹಭಾಗ ಇರುವುದು ಎಂದು ಹೆದರಿಸಿ ಆಕೆಯಿಂದ ಹಣ ಕಬಳಿಸುತ್ತಿದ್ದರು.

ಸೂಚಿ ಅಗ್ರವಾಲ ಎಂದು ಈ ಸಂತ್ರಸ್ತ ವೃದ್ಧ ಮಹಿಳೆಯ ಹೆಸರಾಗಿದೆ. ಜೂನ್ ೧೩ ರಂದು ಈ ಅಪರಾಧಿಗಳು ಅವರಿಗೆ ಮುಂಬಯಿಯಲ್ಲಿನ ಕೊರಿಯರ್ ಅಂಗಡಿಯಿಂದ ಮಾತನಾಡುತ್ತಿದ್ದೇವೆ ಎಂದು ಹೇಳಿ ‘ನಮಗೆ ಒಂದು ಪಾರ್ಸೆಲ್ ದೊರೆತಿದೆ. ಅದರಲ್ಲಿ ಆಕ್ಷೇಪಾರ್ಹ ಸಾಮಾನು ಇದೆ’, ಎಂದು ಅವರು ಮಹಿಳೆಗೆ ಹೇಳಿದರು. ಅದರ ನಂತರ ಇನ್ನೋರ್ವ ಅಪರಾಧಿ ತಾನು ತನಿಖಾ ಅಧಿಕಾರಿ ಎಂದು ಹೇಳಿ ಮಹಿಳೆಗೆ ಮುಂಬಯಿಗೆ ಬರಲು ಆದೇಶ ನೀಡಿದನು. ‘ನಮ್ಮ ಮಾತು ಕೇಳದಿದ್ದರೆ, ಮಾದಕ ಪದಾರ್ಥ ನಿಯಂತ್ರಣ ಇಲಾಖೆಯಿಂದ ನಿಮ್ಮ ವಿಚಾರಣೆ ನಡೆಯುವುದು’, ಎಂದು ಆರೋಪಿಗಳು ಮಹಿಳೆಗೆ ಹೆದರಿಸಿದರು. ಅದರ ನಂತರ ಈ ಮಹಿಳೆ ಕುಟುಂಬದವರಿಗೆ ಈ ಯಾವ ವಿಷಯ ಕೂಡ ಹೇಳಲಿಲ್ಲ ಮತ್ತು ೫ ದಿನದಲ್ಲಿ ಅವರಿಗೆ ೧ ಕೋಟಿ ೩೦ ಲಕ್ಷ ರೂಪಾಯ ಆನ್ಲೈನಲ್ಲಿ ಕಳುಹಿಸಿದರು.

ಸಂಪಾದಕೀಯ ನಿಲುವು

ದೇಶದಲ್ಲಿ ಇಂತಹ ವಂಚನೆಯ ಪ್ರಕರಣಗಳು ಹೆಚ್ಚಿರುವುದನ್ನು ನೋಡಿದರೆ ಕೇಂದ್ರ ಗೃಹ ಸಚಿವಾಲಯದಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !