ಅಕ್ರಮ ಮಸೀದಿಯ ನಿರ್ಮಾಣವನ್ನು ಹಿಂದೂಗಳು ವಿರೋಧಿಸಿದ್ದರು
ಜೋಧಪುರ (ರಾಜಸ್ಥಾನ) – ಜೂನ್ 21 ಶುಕ್ರವಾರ ರಾತ್ರಿ 10 ಗಂಟೆಗೆ ನಗರದ ಸುರಸಾಗರ್ ಪ್ರದೇಶದಲ್ಲಿ ಈದ್ಗಾ ಮಸೀದಿಯ ಅಕ್ರಮ ನಿರ್ಮಾಣವನ್ನು ತೆಗೆದುಹಾಕುವ ಕುರಿತು ವಿವಾದವು ಭುಗಿಲೆದ್ದಿದೆ. ಮುಸ್ಲಿಮರು ಹಿಂದೂಗಳ ಮೇಲೆ ಕಲ್ಲುತೂರಾಟ ಮಾಡಿದರು. ಮೂಲಗಳ ಪ್ರಕಾರ ಆ ಸಮಯದಲ್ಲಿ ಪೆಟ್ರೋಲ್ ಬಾಂಬ್ ಗಳನ್ನೂ ಬಳಸಲಾಗಿತ್ತು. ಬಳಿಕ ಬೆಂಕಿ ಹಚ್ಚಿ ಕಲ್ಲು ತೂರಾಟ ಆರಂಭವಾಯಿತು. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ನಿತಿನ್ ದವೆ ಗಾಯಗೊಂಡಿದ್ದಾರೆ. (ಪೊಲೀಸರ ಮೇಲೂ ಕಲ್ಲೆಸೆಯುವ ಧೈರ್ಯ ಮಾಡುವ ಮತಾಂಧರು ! – ಸಂಪಾದಕರು) ಈ ಪ್ರಕರಣದಲ್ಲಿ 42 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಸೀದಿ ಆವರಣದಲ್ಲಿ ಅಕ್ರಮ ನಿರ್ಮಾಣ
ಈದ್ಗಾ ಮಸೀದಿಯ ಅಕ್ಕಪಕ್ಕದ ಜಾಗ ವಿವಾದದಲ್ಲಿದೆ. ಈ ಭೂಮಿಯಲ್ಲಿ ಮುಸ್ಲಿಮರು ವಿವಾದಾತ್ಮಕ ನಿರ್ಮಾಣವನ್ನು ಮಾಡಿದ್ದಾರೆ. 15 ವರ್ಷಗಳ ಹಿಂದೆ ಇಲ್ಲಿನ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಒಪ್ಪಂದವಾಗಿತ್ತು. ಈ ಒಪ್ಪಂದದ ಪ್ರಕಾರ, ಎರಡೂ ಸಮುದಾಯಗಳು ಈ ಭೂಮಿಯಲ್ಲಿ ಯಾವುದೇ ನಿರ್ಮಾಣವನ್ನು ಮಾಡಲಾಗುವುದಿಲ್ಲ ಎಂದು ಒಪ್ಪಿಕೊಂಡರು; ಆದರೆ ಮುಸಲ್ಮಾನರು ಈ ಒಪ್ಪಂದವನ್ನು ಘಾಳಿಗೆ ತೂರಿ ಇಲ್ಲಿ ಅಕ್ರಮವಾಗಿ ಪ್ರವೇಶ ದ್ವಾರ ನಿರ್ಮಿಸುವ ಕಾರ್ಯ ಆರಂಭಿಸಿದ್ದಾರೆ. ಹಿಂದೂಗಳು ಈ ನಿರ್ಮಾಣವನ್ನು ವಿರೋಧಿಸಿದರು ಮತ್ತು ಪ್ರವೇಶ ದ್ವಾರವನ್ನು ಕೆಡವಿದರು.
ಮುಸ್ಲಿಮರ ಹಿಂಸಾತ್ಮಕ ಗುಂಪು
ಜೂನ್ 21 ರಂದು ರಾತ್ರಿ ಮುಂದುವರೆದಂತೆ, ಮುಸ್ಲಿಂ ಗುಂಪು ಹೆಚ್ಚು ಹಿಂಸಾತ್ಮಕವಾಯಿತು. ಈ ಪ್ರದೇಶದಲ್ಲಿ ಕಲ್ಲು ತೂರಾಟ ಮಾಡಲಾಯಿತು. ಇದಾದ ಬಳಿಕ ಪೊಲೀಸರು ಕೆಲ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅದರಲ್ಲಿ 15-20 ಯುವಕರನ್ನು ವಶಕ್ಕೆ ಪಡೆಯಲಾಯಿತು. ಬೆಳಗ್ಗೆ 9.30ರ ಸುಮಾರಿಗೆ ಪೊಲೀಸರು ಎರಡೂ ಸಮುದಾಯದ ಪ್ರತಿನಿಧಿಗಳನ್ನು ಒಟ್ಟಿಗೆ ಕರೆದರು. ಇಬ್ಬರಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಬಳಿಕ ರಾತ್ರಿ 10.15ಕ್ಕೆ ಮುಸ್ಲಿಮರು ಮತ್ತೆ ಕಲ್ಲು ತೂರಾಟ ಆರಂಭಿಸಿದರು. ಆ ನಂತರ ಹಿಂದೂಗಳೂ ಕಲ್ಲು ತೂರಾಟ ಆರಂಭಿಸಿದರು. ಇದಾದ ನಂತರ ಮುಸಲ್ಮಾನರೊಬ್ಬರ ಅಂಗಡಿಗೆ ಬೆಂಕಿ ಹಚ್ಚಲಾಯಿತು.
ಸಂಪಾದಕೀಯ ನಿಲುವುಭಾರತಾದ್ಯಂತ ಹಿಂಸಾಚಾರಕ್ಕೆ ಮತಾಂಧ ಮುಸ್ಲಿಮರೇ ಕಾರಣ ಎಂಬುದನ್ನು ಗಮನಿಸಿ ! ಭಾರತದಾದ್ಯಂತ ಅಕ್ರಮ ನಿರ್ಮಾಣಗಳನ್ನು ಮಾಡುವ ಮೂಲಕ ಭೂಮಿಯನ್ನು ಕಬಳಿಸುವ ಮುಸ್ಲಿಮರ ಲ್ಯಾಂಡ್ ಜಿಹಾದ್ ಅನ್ನು ಭದ್ರತಾ ಪಡೆಗಳು ಹೇಗೆ ಅಂಕುಶ ಇಡುವರು ? |