ತಮಿಳುನಾಡಿನ ನಕಲಿ ಮದ್ಯ ಸೇವಿಸಿದ ಘಟನೆಯಲ್ಲಿ ಸಾವಿನ ಸಂಖ್ಯೆ 47 ಕ್ಕೆ ಏರಿಕೆ !

ಚೆನ್ನೈ (ತಮಿಳುನಾಡು) – ಕಲ್ಲಾಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿದ್ದರಿಂದ ಸಾವನ್ನಪ್ಪಿದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಹಾಗೂ 30ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯನ್ನು ವಿರೋಧಿಸಿ ಅಣ್ಣಾದ್ರಮುಕ ಕಾರ್ಯಕರ್ತರು ತಮಿಳುನಾಡು ವಿಧಾನಸಭೆಯ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನಸೌಧದ ಪರಿಸರದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿಯವರು ಈ ಪ್ರಕರಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ತಮಿಳುನಾಡು ಸರಕಾರದ ಪರವಾಗಿ. ಈ ಪ್ರಕರಣದಲ್ಲಿ ಪೊಲೀಸರು 49 ವರ್ಷದ ಗೋವಿಂದರಾಜ್ ಉರ್ಫ ಕನ್ನುಕುಟ್ಟಿಯನ್ನು ಬಂಧಿಸಿದ್ದಾರೆ. ಈತನಿಂದ ವಶಪಡಿಸಿಕೊಂಡ ಅಂದಾಜು 200 ಲೀಟರ್ ಅಕ್ರಮ ಮದ್ಯವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಮಾರಣಾಂತಿಕ ‘ಮೀಥೇನ್’ ಅಂಶವಿರುವುದು ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಸ್ಟಾಲಿನ್ ಈ ಘಟನೆಯ ತನಿಖೆಗೆ ಆದೇಶಿಸಿದ್ದಾರೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಸರಕಾರ ಮದ್ಯವನ್ನು ‘ಆದಾಯ ಗಳಿಸುವ ಮೂಲ’ ಎಂದು ನೋಡುವುದನ್ನು ಮುಂದುವರಿಸುತ್ತದೆಯೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ! ಜನರು ಸರಕಾರಕ್ಕೆ ಮದ್ಯ ನಿಷೇಧಿಸಲು ಒತ್ತಡ ಹೇರಬೇಕು !