ಮನೆಯಲ್ಲಿ ಗೋಮಾಂಸ ಇಟ್ಟಿರುವ ಸಂಶಯದಿಂದ ಮುಸ್ಲಿಂ ಕುಟುಂಬಕ್ಕೆ ಥಳಿತ !

‘ಜೈ ಶ್ರೀ ರಾಮ್’ ಘೋಷಣೆ, ಹಿಂದೂ ಗುಂಪಿನಿಂದ ಫ್ರಿಜ್ ಎತ್ತೊಯ್ದರು!

ಭುವನೇಶ್ವರ (ಒಡಿಶಾ) – ಒಂದು ಮುಸ್ಲಿಂ ಕುಟುಂಬದ ಮನೆಯಲ್ಲಿ ಗೋಮಾಂಸ ಇರುವ ಸಂಶಯ ವ್ಯಕ್ತಪಡಿಸಲಾಯಿತು. ಇದರಿಂದ ಕೆಲವು ಹಿಂದೂಗಳು ಅವನ ಮನೆಗೆ ನುಗ್ಗಿ ಅವರ ಕುಟುಂಬದವರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಅವರು `ಜೈ ಶ್ರೀರಾಮ’ ಎಂದು ಘೋಷಣೆ ನೀಡುತ್ತಿದ್ದರು. ಹಲ್ಲೆ ಮಾಡುವವರು ಮುಸಲ್ಮಾನ ಕುಟುಂಬದ ಫ್ರಿಜ್ ಎತ್ತೊಯ್ದರು. ಅದರಲ್ಲಿ ಮಾಂಸ ಇಡಲಾಗಿತ್ತು. ಅದು ಗೋಮಾಂಸವಾಗಿದೆಯೆಂದು ಹಿಂದೂಗಳು ಆರೋಪಿಸಿದ್ದಾರೆ. ಈ ವಿಡಿಯೋದಲ್ಲಿ ಓರ್ವ ಪೊಲೀಸನೂ ಘಟನಾ ಸ್ಥಳದಲ್ಲಿ ಉಪಸ್ಥಿತಿರಿರುವುದು ಕಂಡು ಬರುತ್ತಿದೆ. ರಾಜ್ಯದ ಖೋರದಾನಲ್ಲಿ ಈ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಒಡಿಸ್ಸಾದ ಬಾಲಾಸೋರನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಕರಿ ಈದ ಅಂದರೆ ಜೂನ 17 ರಂದು ಎರಡು ಗುಂಪುಗಳಲ್ಲಿ ಹೊಡೆದಾಟ ನಡೆಯಿತು. ಇದರಲ್ಲಿ 10 ಜನರು ಗಾಯಗೊಂಡಿದ್ದರು.

ಸಂಪಾದಕೀಯ ನಿಲುವು

ಅಕ್ಟೋಬರ್ 2015 ರ ಮಧ್ಯದಲ್ಲಿ ದೆಹಲಿ ಹತ್ತಿರದ ದಾದರಿಯಲ್ಲಿಯೂ ಇದೇ ರೀತಿ ಗೋಹತ್ಯೆಯಾಗಿರುವ ಸಂಶಯದಿಂದ ಅಕಲಾಖ ಈ ಮುಸಲ್ಮಾನನ್ನು ಹಿಂದೂಗಳು ತಥಾಕಥಿತ ಹತ್ಯೆ ಮಾಡಿದ್ದರು. ಇದರಿಂದ ಒಂದೇ ಜಾತಿಯವರು ಹಿಂದೂಗಳು ಅಸಹಿಷ್ಣುಗಳಾಗಿದ್ದಾರೆಂದು ಕೂಗಾಡುವ ಜಾಗತಿಕ ಸ್ತರದಲ್ಲಿ ಎತ್ತಲಾಗುತ್ತಿದೆ. ಈಗ ಈ ಘಟನೆಯಿಂದಲೂ ಅದರ ಪುನರಾವೃತ್ತಿಯಾದರೂ ಆಶ್ಚರ್ಯಪಡಬಾರದು !