ಜಾಲಂಧರ್ (ಪಂಜಾಬ್) – ಜೈಲಿನಲ್ಲಿರುವ ಕುಖ್ಯಾತ ಗೂಂಡಾ ಲಾರೆನ್ಸ್ ಬಿಷ್ಣೋಯ್ ಪಾಕಿಸ್ತಾನದ ಕುಖ್ಯಾತ ಗೂಂಡಾ ಶಹಜಾದ್ ಭಟ್ಟಿಗೆ ಜೈಲಿನಿಂದ ವೀಡಿಯೊ ಕರೆ ಮಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಜೂನ್ 16 ರದ್ದು ಎಂದು ಹೇಳಲಾಗಿದೆ. ಲಾರೆನ್ಸ್ ಸದ್ಯ ಗುಜರಾತ್‌ನ ಸಾಬರಮತಿ ಜೈಲಿನಲ್ಲಿದ್ದಾನೆ. ಈ ವಿಡಿಯೋ ಕುರಿತು ಸಾಬರಮತಿ ಕೇಂದ್ರ ಕಾರಾಗೃಹದ ಉಪ ಪೊಲೀಸ್ ವರಿಷ್ಠಾಧಿಕಾರಿ ಪರೇಶ್ ಸೋಲಂಕಿ ಅವರು, ಈ ವಿಡಿಯೋ ಕಾಲ್ ಬಗ್ಗೆ ನಮಗೆ ತಿಳಿದಿಲ್ಲ. ನಾವು ತನಿಖೆ ಮಾಡುತ್ತೇವೆ. ಈ ವೀಡಿಯೊ ಕರೆಯಲ್ಲಿ, ಲಾರೆನ್ಸ್ ಭಟ್ಟಿಗೆ ಬಕ್ರಿದ್ ಶುಭಾಶಯಗಳನ್ನು ಕೋರಿದ. ಬಳಿಕ ಭಟ್ಟಿ, ‘ಇವತ್ತಲ್ಲ. ನಾಳೆ ಪಾಕಿಸ್ತಾನದಲ್ಲಿ ಈದ್ ಇದೆ’ ಎಂದು ಹೇಳಿದ, ಇದಕ್ಕೆ ಲಾರೆನ್ಸ್ ನಾಳೆ ಕರೆ ಮಾಡಿ ಶುಭ ಹಾರೈಸುತ್ತೇನೆ ಎಂದ.
‘ಸಿಗ್ನಲ್ ಆಪ್’ ಮೂಲಕ ಕಾಲ್ !
ಮೂಲಗಳ ಪ್ರಕಾರ ‘ಸಿಗ್ನಲ್ ಆಪ್’ ಮೂಲಕ ಈ ವಿಡಿಯೋ ಕಾಲ್ ಮಾಡಲಾಗಿದೆ. ಇದು ಎಲ್ಲಿಂದ ಕರೆ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಲಾರೆನ್ಸ್ ತನ್ನ ಇಡೀ ಗ್ಯಾಂಗ್ ಅನ್ನು ಈ ಆ್ಯಪ್ ಮೂಲಕ ಜೈಲಿನಿಂದ ನಡೆಸುತ್ತಿದ್ದಾರೆ ಎಂದು ಭದ್ರತಾ ಪಡೆಗಳು ಶಂಕಿಸಿದ್ದಾರೆ.
Video of call from infamous gangster Lawrence Bishnoi from prison to a notorious gangster in Pakistan, to greet for Bakri Eid goes viral!
This is disgraceful for the prison administration! It is no longer news that mobile phones reach criminals in Indian jails.
Indian prisons… pic.twitter.com/c5qcFmgetw
— Sanatan Prabhat (@SanatanPrabhat) June 18, 2024
ಸಂಪಾದಕೀಯ ನಿಲುವುಇದು ಜೈಲು ಆಡಳಿತಕ್ಕೆ ನಾಚಿಕೆಗೇಡು ! ಭಾರತೀಯ ಜೈಲುಗಳಲ್ಲಿ ಗೂಂಡಾಗಳ ಬಳಿ ಮೊಬೈಲ್ ಪತ್ತೆ ಆಗುವುದು ಹೊಸದೇನಲ್ಲ. ಭಾರತದಲ್ಲಿ ಜೈಲುಗಳು ಸಾಮಾನ್ಯ ಆರೋಪಿಗಳಿಗೆ ಚಾಪೆ ಹಾಗೂ ಶ್ರೀಮಂತರಿಗೆ ಮಣೆಯೆಂಬಂತಾಗಿದೆ ಆಗಿದೆ, ಇದುವರೆಗಿನ ಎಲ್ಲಾ ಪಕ್ಷಗಳ ಸರ್ಕಾರಗಳಿಗೆ ನಾಚಿಕೆಗೇಡು ! ಭಾರತದ ಜೈಲಿನಲ್ಲಿರುವ ಗೂಂಡಾ ಪಾಕಿಸ್ತಾನದ ಗೂಂಡಾ ಜೊತೆ ಮೊಬೈಲ್ ನಲ್ಲಿ ಮಾತನಾಡಲು ಸಾಧ್ಯವಾದರೆ, ಜೈಲಿನಲ್ಲಿರುವ ಜಿಹಾದಿ ಭಯೋತ್ಪಾದಕರು ತಮ್ಮ ಮುಖ್ಯಸ್ಥರಿಗೆ ಈ ರೀತಿ ಸಂಪರ್ಕಿಸುತ್ತಿರಬಹುದು ಎಂದು ಇದು ತೋರಿಸುತ್ತದೆ ! |