World’s Highest Railway Bridge: ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಪ್ರಾಯೋಗಿಕ ಪ್ರಯೋಗ 

ನವ ದೆಹಲಿ – ಕಾಶ್ಮೀರದ ಚೆನಾಬ್ ನದಿಯಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಾಗುವುದು. ರೈಲ್ವೆ ಸಚಿವರಾದ ಶ್ರೀ. ಅಶ್ವಿನಿ ವೈಷ್ಣವ್ ಅವರು ಚೆನಾಬ್ ರೈಲ್ವೇ ಸೇತುವೆಯ ಮೇಲೆ ತಪಾಸಣಾ ರೈಲನ್ನು ಓಡಿಸುವ ವಿಡಿಯೋ ‘ಎಕ್ಸ್’ ನಲ್ಲಿ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ಅವರು, ಇಂದು ಸಂಗಲ್ದಾನ್‌ನಿಂದ ರಿಯಾಸಿಗೆ ಮೊದಲ ಪ್ರಾಯೋಗಿಕ ರೈಲು ಯಶಸ್ವಿಯಾಗಿ ಓಡಿಸಲಾಗಿದೆ. ಅದರಲ್ಲಿ ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆಯನ್ನು ದಾಟಲಾಯಿತು. ಈ ಮಾರ್ಗದ ಹೆಚ್ಚುಕಡಿಮೆ ಎಲ್ಲಾ ಕಾರ್ಯಗಳು ಪೂರ್ಣಗೊಂಡಿವೆ. ಕೇವಲ ‘ಟನೆಲ್ ಸಂಖ್ಯೆ – 1’ರ ಕೆಲವು ಸಣ್ಣಪುಟ್ಟ ಕೆಲಸ ಬಾಕಿ ಇದೆ, ಎಂದು ಅವರು ಅದರ ಮೇಲೆ ಬರೆದಿದ್ದಾರೆ. ಚಿನಾಬ್ ರೈಲ್ವೆ ಸೇತುವೆಯು 1 ಸಾವಿರದ 486 ಕೋಟಿ ವೆಚ್ಚದಲ್ಲಿ ಚೆನಾಬ್ ನದಿಯ ಮೇಲೆ ಅಂದಾಜು 359 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಈ ಸೇತುವೆ ನಿರ್ಮಾಣಕ್ಕೆ ಒಟ್ಟು 30 ಸಾವಿರ ಮೆಟ್ರಿಕ್ ಟನ್ ಉಕ್ಕನ್ನು ಬಳಸಲಾಗಿದೆ. ಈ ಸೇತುವೆಯು ಗಂಟೆಗೆ 260 ಕಿಮೀ ವೇಗದ ಗಾಳಿಯನ್ನು ತಡೆದುಕೊಳ್ಳಬಲ್ಲದು. ಈ ಸೇತುವೆ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಡಿ ನಿರ್ಮಿಸಲಾಗಿದೆ.