ಬಂಗಾಳದಲ್ಲಿ ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ : 15 ಸಾವು, 60 ಜನರಿಗೆ ಗಾಯ

ಡಾರ್ಜಿಲಿಂಗ್ (ಬಂಗಾಳ): ಇಲ್ಲಿನ ರಂಗಪಾಣಿ ಮತ್ತು ನಿಜ್ಬರಿ ನಡುವೆ ಸರಕು ಸಾಗಣೆ ರೈಲು ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು 5 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ. ಜೂನ್ 17 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

(ಸೌಜನ್ಯ – The Indian Express)

ಕಾಂಚನ್‌ಜುಂಗ ಎಕ್ಸ್‌ಪ್ರೆಸ್ ಸೀದಾಹ್‌ಗೆ ಹೋಗುತ್ತಿತ್ತು. ಈ ಅಪಘಾತದಲ್ಲಿ ಸಾವು-ನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಘಟನಾ ಸ್ಥಳಕ್ಕೆ ‘ಪರಿಹಾರ ರೈಲು’ ಕೂಡ ರವಾನೆಯಾಗಿದೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ ! – ರೇಲ್ವೆ ಸಚಿವ

ಅಪಘಾತದ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, “ಬಂಗಾಳದಲ್ಲಿ ಸಂಭವಿಸಿದ ಅಪಘಾತ ದುರದೃಷ್ಟಕರವಾಗಿದೆ. ಈ ಸ್ಥಳದಲ್ಲಿ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಅವರ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ರೈಲ್ವೇ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.” ಎಂದು ಹೇಳಿದರು.