Naxalites Encountered: ಛತ್ತೀಸ್ ಘಡ ದಲ್ಲಿ ಪೊಲೀಸ್ ಎನ್ಕೌಂಟರ್ ನಲ್ಲಿ ೮ ನಕ್ಸಲೀಯರ ಹತ್ಯೆ

ಜಗದಲಪುರ(ಛತ್ತೀಸ್ ಗಢ)- ಛತ್ತೀಸ್ ಗಢದ ಅಬುಝಾಮಾಡ್ ನ ಕುತುಲ್ ಪ್ರದೇಶದಲ್ಲಿ ಪೊಲೀಸ್ ಮತ್ತು ನಕ್ಸಲೀಯರ ನಡುವೆ ನಡೆದ ಎನ್ಕೌಂಟರ್ ನಲ್ಲಿ ಎಂಟು ಮಂದಿ ನಕ್ಸಲೀಯರು ಹತರಾಗಿದ್ದಾರೆ. ಹತ್ಯೆಯಾದ ನಕ್ಸಲೀಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಎನ್ಕೌಂಟರ್ ನಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ, ಹಾಗೂ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಒಟ್ಟು ೧೪೧ ನಕ್ಸಲೀಯರನ್ನು ಸದೆಬಡಿಯಲಾಗಿದೆ.