Naseeruddin Shah : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಂಡು ಟೋಪಿ ಧರಿಸಿರುವುದನ್ನು ನೋಡಬೇಕಂತೆ !

ನಿರಂತರವಾಗಿ ರಾಷ್ಟ್ರಧ್ರೋಹಿ ಹೇಳಿಕೆ ನೀಡುವ ನಟ ನಸುರುದ್ದೀನ್ ಶಾಹ

ನಟ ನಸರುದ್ದೀನ್ ಶಾಹ, ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುಂಡು ಟೋಪಿ (ಮುಸಲ್ಮಾನರು ಧರಿಸುವ ಟೋಪಿ) ಧರಿಸಿರುವುದನ್ನು ನೋಡಬೇಕಂತೆ ಎಂದು ಹಿರಿಯ ಹಿಂದಿ ನಟ ನಸರುದ್ದೀನ್ ಶಾಹ ಹೇಳಿಕೆ ನೀಡಿದ್ದಾರೆ. ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರ ಸಂದರ್ಶನದ ವೇಳೆ ಅವರು ಮೇಲಿನ ಹೇಳಿಕೆ ನೀಡಿದರು. ದೇಶದ ಇತಿಹಾಸದಲ್ಲಿ ಮುಸಲ್ಮಾನ ಜನಾಂಗದ ಒಬ್ಬನೇ ಒಬ್ಬ ಪ್ರತಿನಿಧಿ ಕೂಡ ಕಾಣಿಸುವುದಿಲ್ಲ. ರಾಷ್ಟ್ರೀಯ ಪ್ರಜಾಪ್ರಭುತ್ವದ ಮೈತ್ರಿ ಸರಕಾರದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನ, ಕ್ರೈಸ್ತ, ಸಿಖ್ ಸಂಸದರಿಲ್ಲ; ಆದರೆ ಸರಕಾರದಲ್ಲಿ ಮೋದಿ ಅವರು ೧ ಸಿಖ್ ಮತ್ತು ೧ ಕ್ರೈಸ್ತ ಸಚಿವರನ್ನು ನೇಮಕ ಮಾಡಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕರಣ್ ಥಾಪರ್ ಅವರು ಶಾಹ ಅವರಿಗೆ ಪ್ರಶ್ನೆ ಕೇಳಿದ್ದರು.

ಶಾಹ ಮಾತು ಮುಂದುವರೆಸಿ :

೧. ಹಿಂದೆ ಒಂದು ಕಾರ್ಯಕ್ರಮದಲ್ಲಿ ಮೋದಿಯವರು ಗುಂಡು ಟೋಪಿ ಧರಿಸಲು ನಿರಾಕರಿಸಿದ್ದರು. ಆ ಘಟನೆ ಮರೆಯುವುದು ಕಷ್ಟವಾಗಿದೆ. ಅವರು ಏನಾದರೂ ಗುಂಡು ಟೋಪಿ ಧರಿಸಿದರೆ, ಆಗ ಅದರಿಂದ ನಾನು ಮುಸಲ್ಮಾನರಿಗಿಂತ ಬೇರೆ ಅಲ್ಲ. ನಾವಿಬ್ಬರೂ ಈ ದೇಶದ ನಾಗರೀಕರಾಗಿದ್ದೇವೆ, ಎಂಬ ಸಂದೇಶವನ್ನು ಅವರು ನೀಡಬಹುದು. (ಭಾರತದಲ್ಲಿನ ಬಹಳಷ್ಟು ಮುಸಲ್ಮಾನರು ಪಾಕಿಸ್ತಾನಿ ಪ್ರೇಮಿಗಳಾಗಿದ್ದಾರೆ, ಇದು ಬಹಳಷ್ಟು ಘಟನೆಗಳಿಂದ ಪಾಕಿಸ್ತಾನ ಪ್ರೇಮವನ್ನು ಭಾರತೀಯರು ನೋಡಿದ್ದಾರೆ. ಆದ್ದರಿಂದ ಮುಸಲ್ಮಾನರಿಗೆ ಅವರು ಭಾರತೀಯರಿರುವ ಅರಿವು ಇದೆಯೇ ? ಎಂಬುದನ್ನು ಶಾಹ ಮೊದಲು ಉತ್ತರಿಸಬೇಕು ? – ಸಂಪಾದಕರು ) ಅವರಿಗೆ ಏನಾದರೂ ಈ ದೇಶದಲ್ಲಿನ ಮುಸಲ್ಮಾನರನ್ನು ಆತ್ಮೀಯರನ್ನಾಗಿ ಮಾಡಿಕೊಳ್ಳುವದಿದ್ದರೆ, ಆಗ ಈ ಕೃತಿಯ ಲಾಭ ಅವರಿಗೆ ಆಗಬಹುದು.

೨. ಬಿಜೆಪಿಯಲ್ಲಿನ ಮುಸಲ್ಮಾನ ದ್ವೇಷ ಅವರ ಹಿಡಿತ ಮೀರಿ ಬೆಳೆದಿದೆ. ಇದು ನಿರಾಶದಾಯಕವಾಗಿದೆ. ಅವರಲ್ಲಿ ಮುಸಲ್ಮಾನರ ಕುರಿತು ಇರುವ ದ್ವೇಷ ಬಹಳಷ್ಟು ಆಳವಾಗಿ ಬೇರೂರಿದೆ.

೩. ಮೋದಿ ಅವರಿಗೆ ಅಹಂಕಾರ ಬಹಳವಾಗಿದೆ. ಅವರ ಹೇಳಿಕೆಯನ್ನು ಮಿತಿ ಮೀರಬಾರದು ಎಂದು ಅಪೇಕ್ಷೆ ಮಾಡುವುದು ಧೈರ್ಯವೇ ಸರಿ, ಆದ್ದರಿಂದ ಅವರು ತಪ್ಪಿದ್ದಾರೆ ಎಂದು ಅವರು ಎಂದಿಗೂ ಒಪ್ಪುವುದಿಲ್ಲ. ಆದ್ದರಿಂದ ಅವರು ಗುಂಡು ಟೋಪಿ ಧರಿಸಿದರೆ ಆಗ ಅವರು ಒಂದು ಒಳ್ಳೆಯ ಸಂದೇಶ ನೀಡಿದ ಹಾಗೆ ಆಗಬಹುದು.

ಮುಸಲ್ಮಾನರಿಗೆ ನೀಡಿದ ಸಲಹೆ !

ಮುಸ್ಲಿಮರ ಬಗೆಗಿನ ಬಿಜೆಪಿಯ ದ್ವೇಷದ ಬಗ್ಗೆ ಮಾತನಾಡಿದ ಅಮಿತ್ ಶಾ, ಮುಸ್ಲಿಮರ ದ್ವೇಷಕ್ಕೆ ದ್ವೇಷದಿಂದ ಪ್ರತಿಕ್ರಿಯಿಸಬಾರದು ಎಂದು ಹೇಳಿದರು. ರಾಹುಲ್ ಗಾಂಧಿ ಅವರು ‘ನಫ್ರತ್ ಕೆ ಬಜಾರ್ ಮೇ ಮುಹಬ್ಬತ್ ಕಿ ದುಕಾನ್’ ಎಂದು ಹೇಳಿದಂತೆ ಮುಸ್ಲಿಮರು ಕೂಡ ಪ್ರಯತ್ನಿಸಬೇಕು.(ಭಾರತದ ಮುಸ್ಲಿಮರಲ್ಲಿ ಹೆಚ್ಚಿನವರು ಮತಾಂಧರಾಗಿದ್ದು ಅವರಿಂದ ಇದನ್ನು ನಿರೀಕ್ಷಿಸುವುದು ಹಾಸ್ಯಾಸ್ಪದವಾಗಿದೆ! – ಸಂಪಾದಕ) ಬಿಜೆಪಿ ನಾಯಕರ ಯಾವುದೇ ಹೇಳಿಕೆಯಿಂದ ಬೇಸರಗೊಳ್ಳದೆ, ಅದನ್ನು ದಾಟಿ ದೂರದೃಷ್ಟಿಯಿಂದ ನೋಡಲು ಪ್ರಯತ್ನಿಸಬೇಕು ಎಂದರು.

ಸಂಪಾದಕೀಯ ನಿಲುವು

  • ಧಾರ್ಮಿಕ ಐಕ್ಯತೆ ಕಾಪಾಡುವುದಕ್ಕಾಗಿ ಶಾಹ ಮುಸಲ್ಮಾನ ನಾಯಕರಿಗೆ ಹಿಂದುಗಳ ಟೋಪಿ ಧರಿಸುವುದು, ಹಾಗೂ ಜುಟ್ಟು ಬಿಡಲು ಏಕೆ ಕರೆ ನೀಡುವುದಿಲ್ಲ ? ಇದರಿಂದ ಅವರ ದ್ವಿಮುಖತನ ಕಂಡು ಬರುತ್ತದೆ !
  • ಪ್ರಧಾನಮಂತ್ರಿ ಮೋದಿ ಇವರಿಗೆ ಗುಂಡು ಟೋಪಿ ಧರಿಸುವ ಸಲಹೆ ನೀಡುವ ಶಾಹ ಇವರು ಮೊದಲು ಮುಸಲ್ಮಾನರಿಗೆ ಭಾರತಾದ್ಯಂತ ನಡೆಯುತ್ತಿರುವ ಹಿಂದೂ ವಿರೋಧಿ ಚಟುವಟಿಕೆ, ಭೂಮಿ ಜಿಹಾದ್ ಮತ್ತು ಲವ್ ಜಿಹಾದ್ ನಿಲ್ಲಿಸಲು ಸಲಹೆ ನೀಡಬೇಕು ಮತ್ತು ಆ ನಂತರವೇ ಇಂತಹ ಅಪೇಕ್ಷೆ ಮಾಡಬೇಕು.