Jayesh Pujari Beaten In Court : ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಗೂಂಡಾ ಜಯೇಶ ಪೂಜಾರಿಯನ್ನು ನ್ಯಾಯಾಲಯದ ಪರಿಸರದಲ್ಲೇ ಹಿಗ್ಗಾಮುಗ್ಗಾ ಥಳಿತ !

ಗೂಂಡಾ ಜಯೇಶ ಪೂಜಾರಿ

ಬೆಳಗಾವಿ – ಕೇಂದ್ರ ಸಚಿವ ನಿತಿನ ಗಡಕರಿ ಅವರಿಗೆ ಬೆದರಿಕೆ ಹಾಕಿದ್ದ ಗೂಂಡಾ ಜಯೇಶ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಆ ಪ್ರಕರಣದ ವಿಚಾರಣೆಗಾಗಿ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಾಗ ಆತ ವಾಹನದಿಂದ ಇಳಿದು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದನು. ಇದರಿಂದ ಕೆರಳಿದ ನಾಗರಿಕರು ಹಾಗೂ ವಕೀಲರು ನ್ಯಾಯಾಲಯದ ಪರಿಸರದಲ್ಲೇ ಜಯೇಶನನ್ನು ಥಳಿಸಿದರು. (ಇಂತಹ ಘೋಷಣೆಯನ್ನು ಕೂಗಲು ಯಾರೂ ಧೈರ್ಯ ಮಾಡದಂತೆ ಕಠಿಣ ಕ್ರಮವನ್ನು ಸರಕಾರಿ ಆಡಳಿತ ನಿರ್ಮಿಸುವುದು ಆವಶ್ಯಕವಾಗಿದೆ ! – ಸಂಪಾದಕರು) ಇದರಿಂದ ನ್ಯಾಯಾಲಯದ ಪರಿಸರದಲ್ಲಿ ಆತಂಕ ನಿರ್ಮಾಣವಾಯಿತು. ಇಂತಹ ‘ಪಾಕಿಸ್ತಾನ ಪ್ರಿಯರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಅಲ್ಲಿ ನೆರೆದಿದ್ದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.