Bus Accident In Uttarkashi: ಉತ್ತರಕಾಶಿ-ಗಂಗೋತ್ರಿ ಹೆದ್ದಾರಿಯಲ್ಲಿ ಬಸ್ ಕಣಿವೆಗೆ ಉರುಳಿತು; 3 ಮಹಿಳಾ ಭಕ್ತರ ಸಾವು, 26 ಮಂದಿಗೆ ಗಾಯ

ವಾರಣಾಸಿ – ಈ ಅಪಘಾತದಲ್ಲಿ 3 ಮಹಿಳಾ ಭಕ್ತರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಸಿಗುತ್ತಲೇ ಆ್ಯಂಬುಲೆನ್ಸ್, ಪೊಲೀಸರು, ಭದ್ರತಾ ಪಡೆಗಳು, ವಿಪತ್ತು ನಿರ್ವಹಣಾ ತಂಡ ಮತ್ತು ಅರಣ್ಯ ಇಲಾಖೆ ತಂಡವು ಸ್ಥಳಕ್ಕೆ ಧಾವಿಸಿತು. ಗಂಭೀರವಾಗಿ ಗಾಯಗೊಂಡಿರುವ 17 ಮಂದಿಯನ್ನು ರಿಷಿಕೇಶದ ಆಸ್ಪತ್ರೆಗೆ ದಾಖಲಿಸಲಾಗಿದ್ದು, 9 ಮಂದಿ ಉತ್ತರಕಾಶಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಕಣಿವೆಗೆ ಉರುಳಿದ ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ.