ಮುಸ್ಲಿಂ ಪಕ್ಷದ ಆಕ್ಷೇಪ
ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜಶಾಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆಯ 80ನೇ ದಿನ ಶ್ರೀ ಗಣೇಶ, ಮಾತಾ ವಾಗ್ದೇವಿ, ಮಾತಾ ಪಾರ್ವತಿ, ಹನುಮಾನ್ ಮತ್ತು ಇತರ ದೇವತೆಗಳ ವಿಗ್ರಹಗಳು ಮುಚ್ಚಿದ ಕೋಣೆಯ ಮೆಟ್ಟಿನಿಲ ಕೆಳಗೆ ಪತ್ತೆಯಾಗಿವೆ. ಇದರೊಂದಿಗೆ ಸಾಂಪ್ರದಾಯಿಕ ಆಕಾರದ ಶಂಖ-ಚಕ್ರ ಮತ್ತು ಶಿಖರವನ್ನು ಒಳಗೊಂಡಂತೆ ಸುಮಾರು 79 ಪ್ರಾಚೀನ ವಸ್ತುಗಳು ಕಂಡುಬಂದಿವೆ. ಈ ಮುಚ್ಚಿದ್ದ ಕೋಣೆಯ ಬಾಗಿಲನ್ನು ಎರಡೂ ಪಕ್ಷಗಳ ಸಮ್ಮುಖದಲ್ಲಿ ತೆರೆಯಲಾಯಿತು. ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಅರ್ಜಿದಾರರು ಮಾತನಾಡಿ, ‘ಭೋಜಶಾಲೆಯನ್ನು ಪ್ರಮಾಣೀಕರಿಸುವಲ್ಲಿ ಇದು ಇಲ್ಲಿಯವರೆಗಿನ ದೊಡ್ಡ ಅವಕಾಶವಾಗಿದೆ’ ಎಂದು ಹೇಳಿದ್ದಾರೆ. ಈ ಎಲ್ಲಾ ಮೂರ್ತಿಗಳು ಮತ್ತು ಇತರ ವಸ್ತುಗಳನ್ನು ನಂತರ ಇಲ್ಲಿ ಇರಿಸಲಾಗಿದೆ ಎಂದು ಮುಸ್ಲಿಂ ಪಕ್ಷವು ಆಕ್ಷೇಪಿಸಿದೆ. (ಸತ್ಯವನ್ನು ಒಪ್ಪಿಕೊಂಡರೆ, ಮುಸ್ಲಿಂ ಪಕ್ಷದವರ ಸೋಲಾಗುತ್ತದೆ ಎನ್ನುವ ಹೆದರಿಕೆ ಅವರನ್ನು ಕಾಡುತ್ತಿರುವುದರಿಂದ ಅದು ಕಾಲ್ಪನಿಕವೆಂದು ದಾವೆ ಮಾಡುತ್ತಿದೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ. ನ್ಯಾಯಾಲಯದಲ್ಲಿ ಸತ್ಯವು ಹೊರಬಂದೇ ಬರುತ್ತದೆ ! – ಸಂಪಾದಕರು)
1. ‘ಜಿಪಿಆರ್’ ಯಂತ್ರದ ಮೂಲಕ ತನಿಖೆ ನಡೆಸಿದ ನಂತರ ಸಿಕ್ಕ ಮಾಹಿತಿಯ ಆಧಾರದಲ್ಲಿ ಈ ಸಮೀಕ್ಷೆ ಆರಂಭಿಸಲಾಗಿದೆ. ಒಂದು ಮಹಡಿಯನ್ನು ತೆರೆದ ಬಳಿಕ ಸಮೀಕ್ಷೆ ನಡೆಸುವ ತಂಡಕ್ಕೆ ಕೋಣೆಯ ಉತ್ಖನನ ನಡೆಸಿದಾಗ ಜಮೀನಿನಲ್ಲಿ ಮೊದಲು ಶ್ರೀ ಗಣೇಶ, ಮಾತಾ ವಾಗ್ದೇವಿ, ಮಾತಾ ಪಾರ್ವತಿ, ಮಹಿಷಾಸುರಮರ್ದಿನಿ ಮತ್ತು ಹನುಮಾನ್ ಮೂರ್ತಿಗಳು ಸಿಕ್ಕವು. ಕೆಲವು ಮೂರ್ತಿಗಳು ಎರಡೂವರೆ ಅಡಿ ಎತ್ತರವಿದ್ದರೆ ಇನ್ನು ಕೆಲವು ಎರಡರಿಂದ ಎರಡೂವರೆ ಅಡಿ ಎತ್ತರವಿದೆ.
2. ಯಜ್ಞಶಾಲೆಯ ಮಣ್ಣನ್ನು ತೆಗೆದಾಗ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಪ್ರಾಚೀನ ವಸ್ತುಗಳು ಕಂಡುಬಂದಿವೆ. ಹಿಂದೂ ಪಕ್ಷದ ಅರ್ಜಿದಾರ ಗೋಪಾಲ ಶರ್ಮಾ ಮಾತನಾಡಿ, ಪತ್ತೆಯಾದ ಅವಶೇಷಗಳು ಪ್ರಮಾಣೀಕರಿಸುತ್ತವೆ ಎಂದು ಹೇಳಿದ್ದಾರೆ. ಭೋಜಶಾಲೆಯ ಈ ಕೋಣೆ ಅನೇಕ ವರ್ಷಗಳಿಂದ ಮುಚ್ಚಿತ್ತು ಎಂದು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ ಸದಸ್ಯ ಹಾಗೂ ಅರ್ಜಿದಾರ ಆಶಿಶ್ ಗೋಯಲ್ ಹೇಳಿದರು.
3. ಮುಸ್ಲಿಂ ಪಕ್ಷದ ಪರವಾಗಿ ಅಬ್ದುಲ್ ಸಮದ್ ಮಾತನಾಡಿ, ಉಚ್ಚ ನ್ಯಾಯಾಲಯದ ಆದೇಶದಂತೆ ಈ ಸಮೀಕ್ಷೆ ಸಂಪೂರ್ಣವಾಗಿ ಗೌಪ್ಯವಾಗಿ ನಡೆಸಲಾಗುತ್ತಿದೆ. ಮಣ್ಣು ತೆಗೆಯುವುದರೊಂದಿಗೆ ಆವರಣದಲ್ಲಿ ಸಮತಟ್ಟು ಮಾಡುವ ಕೆಲಸವೂ ನಡೆಯುತ್ತಿದೆ. ಆ ಸಮಯದಲ್ಲಿ ಪತ್ತೆಯಾದ ಅವಶೇಷಗಳನ್ನು ನಂತರ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.