ಮಣಿಪುರ: ಮುಖ್ಯಮಂತ್ರಿಯ ರಕ್ಷಣಾ ಪಡೆಯ ಮೇಲೆ ಭಯೋತ್ಪಾದಕರಿಂದ ದಾಳಿ !

ಇಂಫಾಲ್ (ಮಣಿಪುರ) – ರಾಜ್ಯದ ಮುಖ್ಯಮಂತ್ರಿ ಎನ್ ಬೇರೇನ ಸಿಂಹ ಅವರ ರಕ್ಷಣಾ ಪಡೆಯ ಮೇಲೆ ಭಯೋತ್ಪಾದಕರಿಂದ ದಾಳಿ ನಡೆದಿದೆ. ಸುದೈವದಿಂದ ಮುಖ್ಯಮಂತ್ರಿಗಳು ಈ ಪಡೆಯ ಜೊತೆ ಇರಲಿಲ್ಲ. ಮುಖ್ಯಮಂತ್ರಿಗಳ ಹೆಚ್ಚುವರಿ ರಕ್ಷಣಾ ಪಡೆಯ ಮೇಲೆ ನಡೆದಿರುವ ದಾಳಿಯಲ್ಲಿ ಇಬ್ಬರು ರಕ್ಷಣಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಮುಖ್ಯಮಂತ್ರಿಗಳು ಹಿಂಸಾಚಾರ ಪೀಡಿತ ಜಿಡಿಬಿಮಲಾ ಪ್ರದೇಶಕ್ಕೆ ಭೇಟಿ ನೀಡುವವರಿದ್ದರು.

ಅದಕ್ಕೂ ಮೊದಲೇ ಮುಖ್ಯಮಂತ್ರಿಗಳ ಹೆಚ್ಚುವರಿ ರಕ್ಷಣಾ ಪಡೆಯು ಪರಿಸ್ಥಿತಿಯ ವರದಿ ಪಡೆಯುವದಕ್ಕಾಗಿ ಜಿರಿಬಾಬಗೆ ತೆರಳಿತ್ತು. ಈ ಘಟನೆಯ ನಂತರ ಮಣಿಪುರ ಪೊಲೀಸ್ ಕಮಾಂಡೋ ಮತ್ತು ಅಸ್ಸಾಂ ರೈಫಲ್ ಇವರ ಸಂಯುಕ್ತ ತಂಡ ತಯಾರಿಸಿದ್ದು ಅಪರಾಧಿಗಳ ಶೋಧಕಾರ್ಯ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಎನ್ ಬೇರೇನಸಿಂಹ ಅವರು ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.

ಸಂಪಾದಕೀಯ ನಿಲುವು

ಈಶಾನ್ಯ ಭಾಗದಲ್ಲೀಗ ಭಯೋತ್ಪಾದಕರು ರಾಜಕೀಯ ನಾಯಕರನ್ನು ನಾಶ ಮಾಡುವ ಸಂಚು ರೂಪಿಸಿದ್ದಾರೆಂದು ಇದರಿಂದ ಗಮನಕ್ಕೆ ಬರುತ್ತಿದೆ. ಅಲ್ಲಿಯ ಭಯೋತ್ಪಾದನೆಯನ್ನು ನಾಶ ಮಾಡುವುದು ಆವಶ್ಯಕವಾಗಿದೆ !