ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲೇ ಬಾರದು; ಆಡಿದರೆ ಹೀನಾಯವಾಗಿ ಸೋಲಿಸಬೇಕು ! – ಯು.ಟಿ. ಖಾದರ್

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಬಗ್ಗೆ ಖಾದರ್ ಹೇಳಿಕೆ !

ಮಂಗಳೂರು – ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ಅಮೇರಿಕಾದಲ್ಲಿ ‘ಟಿ-20 ಕ್ರಿಕೆಟ್ ವಿಶ್ವಕಪ್’ ನಡೆಯಲಿದೆ. ಈ ಕುರಿತು ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಇವರು, ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು. ಪಾಕಿಸ್ತಾನಿಗಳು ಇಲ್ಲಿಗೆ ಬಂದಾಗ ಅವರನ್ನು ವಿರೋಧಿಸಿರುವುದನ್ನು ನಾವು ನೋಡಿದ್ದೇವೆ. ಭಾರತ ಅವರ ವಿರುದ್ಧ ಆಡುವುದನ್ನು ನಿಲ್ಲಿಸಿತ್ತು. ಹಾಗಿದ್ದರೆ ವಿದೇಶದಲ್ಲಿ ಇವರೊಂದಿಗೆ ಆಡುವುದೇಕೆ ? ಅವರು ಸರಿಯಾಗಿ ವರ್ತಿಸದ ಹೊರತು ಅವರೊಂದಿಗೆ ಆಟವಾಡಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಖಾದರ್ ಮಾತು ಮುಂದುವರೆಸಿ, ಪಾಕಿಸ್ತಾನದ ವಿರುದ್ಧ ನಾಳೆಯ ಪಂದ್ಯವನ್ನು ಆಡಿದರೆ ನಮಗೆ ಸಾಮಾನ್ಯ ಗೆಲುವು ಬೇಕಾಗಿಲ್ಲ ಬದಲಾಗಿ ದೊಡ್ಡ ಗೆಲುವು ಬೇಕು. ನಾವು ಪಾಕಿಸ್ತಾನವನ್ನು ಸೋಲಿಸಲು ಮಾತ್ರವಲ್ಲ, ಅವರನ್ನು ಹಿನಾಯವಾಗಿ ಸೋಲಿಸುವುದಿದೆ ಎಂದು ಹೇಳಿದರು.