IIT Bombay Recognized Internationally: ‘ಕ್ಯೂಎಸ್ ವಿಶ್ವ ಶ್ರೇಯಾಂಕ 2025’ರಲ್ಲಿ ಐಐಟಿ ಮುಂಬಯಿ 118ನೇ ಸ್ಥಾನ !

ಐಐಟಿ ಮುಂಬಯಿ ದೇಶದಲ್ಲೇ ಮೊದಲ ಸ್ಥಾನ !

ಮುಂಬಯಿ – ಶೈಕ್ಷಣಿಕ ಸಂಸ್ಥೆಗಳ ‘ಕ್ಯೂಎಸ್ ವಿಶ್ವ ಶ್ರೇಯಾಂಕ 2025’ ರಲ್ಲಿ, ಐಐಟಿ ಮುಂಬಯಿ 118 ನೇ ಸ್ಥಾನದಲ್ಲಿದೆ. ಇದರೊಂದಿಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ 211 ನೇ ಸ್ಥಾನದಲ್ಲಿದೆ, ಐಐಟಿ ಮದ್ರಾಸ್ 227 ನೇ ಸ್ಥಾನದಲ್ಲಿದೆ, ಐಐಟಿ ಕಾನ್ಪುರ 263 ನೇ ಸ್ಥಾನದಲ್ಲಿದೆ ಮತ್ತು ದೆಹಲಿ ವಿಶ್ವವಿದ್ಯಾಲಯ 328 ನೇ ಸ್ಥಾನದಲ್ಲಿದೆ. ದೇಶದಲ್ಲಿ ಐಐಟಿ ಮುಂಬಯಿ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ವಿಶ್ವವಿದ್ಯಾಲಯ ಎರಡನೇ ಸ್ಥಾನದಲ್ಲಿದೆ. ಶೈಕ್ಷಣಿಕ ಖ್ಯಾತಿ, ವಿದ್ಯಾರ್ಥಿಗಳ ಅನುಪಾತ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು, ಉದ್ಯೋಗದ ಫಲಿತಾಂಶಗಳು ಮತ್ತು ಅಂತರರಾಷ್ಟ್ರೀಯ ಸಂಶೋಧನೆಗಳು ಈ ಮೌಲ್ಯಮಾಪನಕ್ಕೆ ಮಾನದಂಡಗಳಾಗಿವೆ.

ಮಹಾರಾಷ್ಟ್ರದ 4 ಶಿಕ್ಷಣ ಸಂಸ್ಥೆಗಳು ಸೇರಿವೆ !

‘ಕ್ಯೂಎಸ್ ವಿಶ್ವ ಶ್ರೇಯಾಂಕ’ದಲ್ಲಿ ಮಹಾರಾಷ್ಟ್ರದ 4 ಶಿಕ್ಷಣ ಸಂಸ್ಥೆಗಳು ಮೊದಲ ಸಾವಿರ ಸಂಸ್ಥೆಗಳಲ್ಲಿ ಸೇರಿವೆ. ಇವುಗಳಲ್ಲಿ ಐಐಟಿ ಮುಂಬಯಿ, ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ, ಸಿಂಬಿಯಾಸಿಸ್ ಅಂತರಾಷ್ಟ್ರೀಯ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಮುಂಬಯಿ ವಿಶ್ವವಿದ್ಯಾಲಯ ಸೇರಿವೆ.