Odisha Assembly Election Result : ಬಿಜೆಪಿ ತೆಕ್ಕೆಗೆ ಒಡಿಶಾ !

ಬಿಜೆಡಿಯನ್ನು ಸೋಲಿಸಿ ಅಧಿಕಾರ ಪ್ರಾಪ್ತಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್

ಭುವನೇಶ್ವರ – ಒಡಿಶಾದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ)ವನ್ನು ಸೋಲಿಸುವ ಮೂಲಕ ಬಿಜೆಪಿ ಜಯಗಳಿಸಿದೆ. ಕಳೆದ 27 ವರ್ಷಗಳಿಂದ ಬಿಜೆಡಿ ಪಕ್ಷ ಅಧಿಕಾರದಲ್ಲಿತ್ತು. ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪ್ರಭಾವದಿಂದಾಗಿ ಬಿಜೆಡಿಯನ್ನು ಸೋಲಿಸುವುದು ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸೋಲಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಇದೊಂದು ಐತಿಹಾಸಿಕ ಗೆಲುವು ಎಂದೇ ಪರಿಗಣಿಸಲಾಗುತ್ತಿದೆ. ಒಡಿಶಾ ವಿಧಾನಸಭೆಯಲ್ಲಿ ಒಟ್ಟು 147 ಸ್ಥಾನಗಳಿವೆ. ಅಧಿಕಾರಕ್ಕೆ ಬರಲು 74 ಸ್ಥಾನಗಳ ಅಗತ್ಯವಿರುತ್ತದೆ. ಬಿಜೆಪಿ 78 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಡಿ 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ನವೀನ್ ಪಟ್ನಾಯಕ್ ಸಹಿತ ಅನೇಕ ಸಚಿವರು ಪರಾಭವಗೊಂಡಿದ್ದಾರೆ. ಇದರಲ್ಲಿ ಯುವ ಸಚಿವ ಪಿ.ಕೆ. ಅತಮ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶೋಕ್ ಪಂಡಾ, ಹಣಕಾಸು ಸಚಿವ ಬಿಕ್ರಮ್ ಅರುಕ್ಷಾ, ಗಣಿ ಸಚಿವ ಪ್ರಫುಲ್ಲ ಮಲ್ಲಿಕ್ ಇವರುಗಳು ಸೇರಿದ್ದಾರೆ.