ನವ ದೆಹಲಿ – ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣವು ಜೂನ್ 3 ರಿಂದ ಟೋಲ್ ದರವನ್ನು ಶೇಕಡಾ 5 ರಷ್ಟು ಹೆಚ್ಚಿಸಿದೆ. ಪ್ರತಿ ವರ್ಷ ಟೋಲ್ ದರದಲ್ಲಿ ಏರಿಕೆ ಮಾಡಲಾಗುತ್ತದೆ ಎಂದು ಪ್ರಾಧಿಕರಣದ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ದರ ಹೆಚ್ಚಳವು ಮೊದಲೇ ಆಗ ಬೇಕಾಗಿತ್ತು; ಆದರೆ, ನೀತಿ ಸಂಹಿತೆ ಅವಧಿಯಲ್ಲಿ ಟೋಲ್ ದರ ಹೆಚ್ಚಳ ಮಾಡಬಾರದು ಎಂದು ಚುನಾವಣಾ ಆಯೋಗ ಸೂಚಿಸಿತ್ತು. ಇದರಿಂದಾಗಿ ಚುನಾವಣಾ ಸಮಯದಲ್ಲಿ ಟೋಲ್ ದರ ಹೆಚ್ಚಳವನ್ನು ತಡೆಯಲಾಗಿತ್ತು. ಈಗ ಟೋಲ್ ದರವನ್ನು ಶೇ.3 ರಿಂದ 5 ರಷ್ಟು ಹೆಚ್ಚಿಸಲಾಗುತ್ತಿದೆ. ದೇಶಾದ್ಯಂತ 1,100 ಟೋಲ್ ಕೇಂದ್ರಗಳಲ್ಲಿ ಟೋಲ್ ದರವನ್ನು ಹೆಚ್ಚಿಸಲಾಗುವುದು.
NHAI hikes tolls by 5% from today
The annual revision of highway user fees, was expected to come into effect on April 1.
However, the hike was deferred due to the 2024 Lok Sabha elections.#Elections2024 #LoksabhaElections2024pic.twitter.com/n5Phw6SH19
— Sanatan Prabhat (@SanatanPrabhat) June 3, 2024