ಭಾಂಗರದಲ್ಲಿ ಬಾಂಬ್ ಸ್ಫೋಟ್ ಹಾಗೂ ಜಯನಗರದಲ್ಲಿ ಎಲೆಕ್ಟ್ರಾನಿಕ ಮತದಾನ ಯಂತ್ರ ಲೂಟಿ !
ನವ ದೆಹಲಿ – ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿನ ಮತದಾನದ ಏಳನೆಯ ಹಂತ ಎಂದರೆ ಕೊನೆಯ ಹಂತ ಜೂನ್ ೧ ರಂದು ನೆರವೇರಿತು. ೮ ರಾಜ್ಯಗಳಲ್ಲಿನ ೫೭ ಸ್ಥಾನಗಳಿಗಾಗಿ ಈ ಹಂತದ ಮತದಾನ ನಡೆದಿದೆ. ಈ ಸಮಯದಲ್ಲಿ ಬಂಗಾಳದಲ್ಲಿನ ದಕ್ಷಿಣ ೨೪ ಪರಗಣಾ ಜಿಲ್ಲೆಯಲ್ಲಿನ ಭಾಂಗರದಲ್ಲಿ ಬಾಂಬ್ ಸ್ಫೋಟ್ ನಡೆದಿದೆ. ಭಾಜಪವು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದೆ. ಹಾಗೂ ರಾಜ್ಯದ ಮುಖ್ಯ ಚುನಾವಣಾ ಕಾರ್ಯಾಲಯವು ಪೋಸ್ಟ್ ಮಾಡುತ್ತಾ, ಸಮೂಹದಿಂದ ಜಯನಗರದಲ್ಲಿನ ಬೇನಿಮಾಧವಪುರ ಶಾಲೆಯ ಹತ್ತಿರ ಸೆಕ್ಟರ್ ಆಫೀಸಿನಲ್ಲಿ ಕಾದಿರಿಸಿರುವ ಎಲೆಕ್ಟ್ರಾನಿಕ್ ಮತ ಯಂತ್ರಗಳು ಮತ್ತು ಕಾಗದ ಪತ್ರಗಳನ್ನು ಲೂಟಿ ಮಾಡಿದ್ದಾರೆ. ಅಲ್ಲಿಯ ಈ ಯಂತ್ರಗಳನ್ನು ಕೆರೆಗೆ ಎಸೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾಜಪದ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುವೆಂದೂ ಅಧಿಕಾರಿ ಇವರು, ರಾಜ್ಯದಲ್ಲಿನ ಅನೇಕ ಮತದಾನ ಕೇಂದ್ರದಲ್ಲಿ ಅಳವಡಿಸಲಾಗಿರುವ ವೆಬ್ ಕಾಸ್ಟಿಂಗ್ ಕ್ಯಾಮೆರಾ ಹಾಳಾಗಿದ್ದವು. ಅದರಲ್ಲಿ ಡೈಮಂಡ್ ಹಾರ್ಬರ್ ನಲ್ಲಿ ೧೪೧, ಮಥುರಾಪುರದಲ್ಲಿ ೧೩೧, ಜಾಯನಗರದಲ್ಲಿ ೯೦ ಮತ್ತು ಜಾಧವಪುರದಲ್ಲಿ ೬೦ ಕ್ಯಾಮೆರಾಗಳ ಸಮಾವೇಶವಿದೆ. ಇನ್ನೊಂದು ಕಡೆ ತೃಣಮೂಲ ಕಾಂಗ್ರೆಸ್ಸಿನ ನಾಯಕ ಮತ್ತು ಮಮತಾ ಬ್ಯಾನರ್ಜಿ ಇವರ ಸಹೋದರ ಸಂಬಂಧಿ ಅಭಿಷೇಕ ಬ್ಯಾನರ್ಜಿ ಇವರು ವಾರಣಸೀಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದ್ದರು. ಇಲ್ಲಿ ಅಭ್ಯರ್ಥಿಯ ಅರ್ಜಿ ರದ್ದು ಪಡಿಸಲಾಗಿದೆ. ಅಭ್ಯರ್ಥಿಗೆ ಅರ್ಜಿ ತುಂಬಿಸಲು ಚುನಾವಣಾ ಆಯೋಗದಿಂದ ಕಾರ್ಯಾಲಯದಲ್ಲಿ ಕೂಡ ಪ್ರವೇಶ ನೀಡಲಾಗುತ್ತಿಲ್ಲ. ಹೀಗೆ ಸತತ ೪ – ೫ ದಿನ ನಡೆದಿದೆ. ನಿಮಗೆ (ಭಾಜಪಗೆ) ತಿಳಿದಿದೆಯೇ, ನಿಮಗೆ ಜನರು ಸಹಕಾರ ನೀಡುತ್ತಾರೆ, ಹಾಗಾದರೆ ನೀವು ಏಕೆ ಹೆದರುತ್ತೀರಾ ? ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಬಂಗಾಳದಲ್ಲಿ ಪ್ರತಿಸಲ ಚುನಾವಣೆಯ ಸಮಯದಲ್ಲಿ ಹಿಂಸಾಚಾರ ನಡೆಯುತ್ತಿದೆ, ಇದೇನು ಹೊಸದಲ್ಲ. ಒಟ್ಟಾರೆ ಬಂಗಾಳ ರಾಜ್ಯ ಪ್ರಜಾಪ್ರಭುತ್ವಕ್ಕಾಗಿ ಲಜ್ಜಾಸ್ಪದವಾಗಿದೆ ! |