ಸಂತ್ರಸ್ತೆಯು ಘಟನೆಯನ್ನು ಹೇಳಬಾರದು ಎಂದು ಮೌಲ್ವಿಯು ಆಕೆಯಿಂದ ಕುರಾನ ಮೇಲೆ ಪ್ರತಿಜ್ಞೆ ಮಾಡಿಸಿಕೊಂಡನು
(ಮೌಲವಿಯೆಂದರೆ ಇಸ್ಲಾಮಿನ ಧಾರ್ಮಿಕ ನಾಯಕ)
ಮಧುಬಾನಿ (ಬಿಹಾರ) – ಬಿಹಾರದ ಮಧುಬಾನಿಯಲ್ಲಿ ಮದರಸಾದ ಓರ್ವ ಮೌಲ್ವಿಯು ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಮಾಡಿದನು. ಅಲ್ಲಿನ ಮದರಸಾದ ಮೌಲ್ವಿಯು ಸಂತ್ರಸ್ತ ಅಪ್ತಾಪ್ತ ಬಾಲಕಿಯ ಮೇಲೆ ಅನೇಕ ಸಲ ಬಲಾತ್ಕಾರ ಮಾಡಿದನು. ಸಂತ್ರಸ್ತಯು 7 ತಿಂಗಳ ಗರ್ಭಿಣಿಯಾದ ನಂತರ ಈ ಪ್ರಕರಣ ಬಹಿರಂಗವಾಯಿತು. ಆರೋಪಿ ಮೌಲ್ವಿಯು ಪರಾರಿಯಾಗಿದ್ದೂ, ಅವನನ್ನು ಬಂಧಿಸಲು ಪೊಲೀಸರು ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದಾರೆ.
ಈ ವಿಷಯದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ಸಂತ್ರಸ್ತ ಬಾಲಕಿ ಟ್ಯೂಶನಗಾಗಿ ಮದರಸಾಗೆ ಹೋಗುತ್ತಿದ್ದಳು. ಇತರೆ ಬಾಲಕಿಯರು ಮನೆಗೆ ಹೋದ ಬಳಿಕ ಮೌಲ್ವಿಯು ಅವಳನ್ನು ಅಲ್ಲೇ ಇರಿಸಿಕೊಂಡು ಅವಳ ಮೇಲೆ ಬಲಾತ್ಕಾರ ಮಾಡುತ್ತಿದ್ದನು. ಪ್ರತಿ ಬಾರಿಯೂ ಆಕೆಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಇಷ್ಟೇ ಅಲ್ಲ, ಮೌಲ್ವಿಯು ಈ ಘಟನೆಯನ್ನು ಬೇರೆಲ್ಲಿಯಾದರೂ ಬಾಯಿ ಬಿಡಬಾರದು ಎಂದು ಅವಳಿಗೆ ಕುರಾನ ಮೇಲೆ ಪ್ರತಿಜ್ಞೆ ಮಾಡಿಸಿಕೊಂಡಿದ್ದನು. ಬಾಲಕಿಯು 7 ತಿಂಗಳ ಗರ್ಭಿಣಿಯಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಾಹನ ಭಯದಿಂದ ಸಂತ್ರಸ್ತೆ ತನ್ನ ಪೋಷಕರಿಗೆ ವಿಷಯ ತಿಳಿಸಿರಲಿಲ್ಲ. ಅವಳು ಏಳು ತಿಂಗಳ ಗರ್ಭಿಣಿಯಾಗಿದ್ದಾಗ, ಅವಳ ತಾಯಿಯು ಅವಳನ್ನು ಪ್ರಶ್ನಿಸಿದಳು. ತದನಂತರ ಅವಳು ಸಂಪೂರ್ಣ ಪ್ರಕರಣವನ್ನು ತನ್ನ ತಾಯಿಗೆ ತಿಳಿಸಿದಳು. ಸಂತ್ರಸ್ತ ಬಾಲಕಿಯ ಕುಟುಂಬದಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಗ್ರಾಮದ ಜನರೇ ಮದರಸಾಗೆ ಬೀಗ ಜಡಿದರು!
ಸರಕಾರಿ ಸಂಸ್ಥೆಗಳು ಏನೂ ಮಾಡುವುದಿಲ್ಲ, ಎನ್ನುವ ದೃಢವಾಗಿದ್ದರಿಂದ ಈಗ ಜನರೇ ತಪ್ಪು ಕೃತ್ಯಗಳನ್ನು ತಡೆಯಲು ಕೃತಿಗಳನ್ನು ಮಾಡತೊಡಗಿವೆ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೇ ?
ಈ ಮಾಹಿತಿ ಸಿಗುತ್ತಲೇ ಗ್ರಮಾದ ಜನರು ಆಕ್ರೋಶಗೊಂಡರು. ಅವರು ಮದರಸಾಗೆ ಬೀಗ ಜಡಿದರು ಮತ್ತು ಮೌಲ್ವಿಯ ವಿರುದ್ಧ ಪ್ರತಿಭಟನೆಗಳು ನಡೆಸಿದವು. ಮದರಸಾಗೆ ಹೋಗುವ ವಿದ್ಯಾರ್ಥಿನಿಯರು ಮದರಸಾದ ಪ್ರಮುಖ ಮೌಲ್ವಿ ಕಾರಿ ಶಾಹನವಾಝ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣೆ ಬಹಿರಂಗವಾದ ಬಳಿಕ ಖುಟೋನಾ ಪೊಲೀಸರು ಠಾಣೆಯಲ್ಲಿ ಕಾರಿ ಶಾಹನಾವಾಝ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಮದರಸಾಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಇಂತಹ ಘಟನೆಗಳಿಂದಾಗಿ ‘ಮದರಸಾ ಎಂದರೆ ಕಾಮವಾಸನೆಯನ್ನು ಪೂರ್ಣಗೊಳಿಸುವ ಸ್ಥಳ’ ಎಂಬಂತಹ ಚಿತ್ರಣ ಸೃಷ್ಟಿಯಾಗಿದೆ. ಈ ವಿಷಯದ ಬಗ್ಗೆ ಒಬ್ಬನೇ ಒಬ್ಬ ಮುಸ್ಲಿಂ ನಾಯಕ, ಪ್ರಗತಿಪರರು ಅಥವಾ ಪ್ರಸಾರಮಾಧ್ಯಮಗಳು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ ! ಆಧುನಿಕರಣದ ಹೆಸರಿನಡಿಯಲ್ಲಿ ಮದರಸಾಗಳಿಗೆ ಲಕ್ಷಾಂತರ ರೂಪಾಯಿ ಅನುದಾನವನ್ನು ನೀಡುವ ಸ್ಥಳೀಯ ಸ್ವರಾಜ್ಯ ಸಂಸ್ಥೆ, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಈಗಲಾದರೂ ಮದರಸಾಗಳ ನೈಜತೆಯನ್ನು ಗಮನಕ್ಕೆ ತೆಗೆದುಕೊಳ್ಳುವುದೇ ? |