ಚಾಂದೀಪುರ (ಓಡಿಶಾ) – ಭಾರತವು ಗಾಳಿಯಿಂದ ಭೂಮಿಯ ಮೇಲೆ ದಾಳಿ ನಡೆಸುವ ` ರುದ್ರಂ- 2’ ಹೆಸರಿನ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸ್ವದೇಶಿ ನಿರ್ಮಾಣವಾದ ‘ರುದ್ರಂ-2’ ಕ್ಷಿಪಣಿಯು ಗಾಳಿಯಿಂದ ಶತ್ರು ರಡಾರ್‌ಗಳನ್ನು ಭೇದಿಸುವಲ್ಲಿ ಸಕ್ಷಮವಾಗಿದೆ. ಈ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಅಭಿವೃದ್ಧಿಪಡಿಸಿದೆ. ಇದರ ಪರೀಕ್ಷೆಯನ್ನು ‘ಸುಖೋಯ-30 ಎಂಕೆ-1’ ಈ ಯುದ್ಧ ವಿಮಾನದ ಮೂಲಕ ನಡೆಸಲಾಗಿದೆ. ಕ್ಷಿಪಣಿಯ ಮಾರಕ ಕ್ಷಮತೆಯು 300 ಕಿಲೋಮೀಟರಗಳಷ್ಟಿದೆ. ರುದ್ರಂ ಕ್ಷಿಪಣಿಯು ಭಾರತದ ಮೊಟ್ಟಮೊದಲ ಸ್ವದೇಶಿ ಎಂಟಿ ರೇಡಿಯೇಶನ್ ಕ್ಷಿಪಣಿಯಾಗಿದೆ. ಇದನ್ನು ಭಾರತೀಯ ವಾಯುದಳಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ.