ಯಲಹಂಕದ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕಕ್ಕೆ ಮಸಿ ಬಳಿದ ಮೂವರ ಬಂಧನ

ಯಲಹಂಕ – ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕ ಮತ್ತು ನಾಮಫಲಕದಲ್ಲಿ ವೀರ್ ಸಾವರ್ಕರ್ ಅವರ ಚಿತ್ರಕ್ಕೆ ಮಸಿ ಬಳಿದ ಆರೋಪದಡಿಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ ರಾಜ್, ನಿಶ್ಚಯ ಗೌಡ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ತಿಳಿದುಬಂದಿಲ್ಲ. ವೀರ್ ಸಾವರ್ಕರ್ ಇವರಿಗೆ ನೀಡಲಾದ ಗೌರವ ಭಗತಸಿಂಹ ಇವರಿಗೆ ಸಿಗುತ್ತಿಲ್ಲ. ಮೇಲ್ಸೇತುವೆಗೆ ‘ವೀರ್ ಸಾವರ್ಕರ್’ ಬದಲಿಗೆ ಭಗತ್ ಸಿಂಗ್ ಹೆಸರಿಡಬೇಕು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ. ಮಸಿ ಎರಚಿದ ವಿಷಯ ತಿಳಿದ ತಕ್ಷಣ ಬಿಜೆಪಿಯವರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.