Indore District Court : ಇಂದೋರ್(ಮಧ್ಯಪ್ರದೇಶ): ನ್ಯಾಯಾಧೀಶರ ಮೇಲೆ ಚಪ್ಪಲಿಯ ಹಾರ ಎಸೆದ ಮಹಮ್ಮದ್ ಸಲೀಂ !

ಇಂದೋರ್(ಮಧ್ಯಪ್ರದೇಶ) – ನ್ಯಾಯಾಲಯದಲ್ಲಿ ಮಹಮ್ಮದ್ ಸಲಿಂ ಎಂಬವನು ನ್ಯಾಯಾಧೀಶರ ಮೇಲೆ ಚಪ್ಪಲಿಯ ಹಾರ ಎಸೆದನು. ಈ ಘಟನೆಯ ನಂತರ ತಕ್ಷಣ ಅಲ್ಲೇ ಉಪಸ್ಥಿತರಿದ್ದ ನಾಗರಿಕರು ಮತ್ತು ನ್ಯಾಯವಾದಿಗಳು ಸಲೀಮನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದರು ಮತ್ತು ಪೊಲೀಸರಿಗೆ ಒಪ್ಪಿಸಿದರು. ಈ ಘಟನೆಯ ನಂತರ ನ್ಯಾಯಾಲಯದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಯಿತು. ವಿಚಿತ್ರವೆಂದರೆ ಈ ನ್ಯಾಯಾಲಯದಲ್ಲಿ ಈ ಹಿಂದೆಯು ಕೂಡ ಈ ರೀತಿಯ ಘಟನೆಗಳು ನಡೆದಿದ್ದವು. (ನ್ಯಾಯಾಲಯದಲ್ಲಿ ಈ ಹಿಂದೆ ಈ ರೀತಿಯ ಘಟನೆಗಳು ನಡೆದಿದ್ದರೂ ಕೂಡ ಪೊಲೀಸರು ಆ ದೃಷ್ಟಿಯಿಂದ ಏಕೆ ಜಾಗರೂಕರಾಗಿರಲಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ. -ಸಂಪಾದಕರು)

ಈ ನ್ಯಾಯಾಲಯದಲ್ಲಿ ಇಬ್ಬರು ಮೌಲ್ವಿಗಳ (ಇಸ್ಲಾಮಿನ ಧಾರ್ಮಿಕ ನಾಯಕರು ) ವಿರುದ್ಧದ ಒಂದು ಮೊಕದ್ದಮೆಯ ತೀರ್ಪು ಬರಬೇಕಿತ್ತು. ಯಾವ ನ್ಯಾಯಾಧೀಶರು ತೀರ್ಪು ನೀಡುವವರಿದ್ದರು, ಅವರ ಮೇಲೆಯೇ ಚಪ್ಪಲಿಯ ಹಾರ ಎಸೆಯಲಾಯಿತು. ಸಲೀಂ ತನ್ನ ಮನೆಯಿಂದ ಚಪ್ಪಲಿಯ ಹಾರ ತಂದಿದ್ದನು. ಈ ಹಾರ ತಂದಿರುವ ವಿಷಯ ರಕ್ಷಣಾ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗೆ ಹೇಗೆ ಗಮನಕ್ಕೆ ಬರಲಿಲ್ಲ? ಎಂಬ ಪ್ರಶ್ನೆ ಉದ್ಭವಿಸಿದೆ. ಸಲೀಮನ ಚೀಲದ ಪರಿಶೀಲನೆ ಏಕೆ ನಡೆಯಲಿಲ್ಲ? ಎಂಬ ಪ್ರಶ್ನೆ ಕೂಡ ಎದುರಾಗಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯದಲ್ಲಿ ಸುರಕ್ಷತೆ ಶೂನ್ಯ ! ಚಪ್ಪಲಿಯ ಜಾಗದಲ್ಲಿ ಆಘಾತಕಾರಿ ಶಸ್ತ್ರ ಇದ್ದಿದ್ದರೆ ಏನಾಗಬಹುದಾಗಿತ್ತು? ಈ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು.