ನವದೆಹಲಿ – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್ .ಐ.) ನಿಷೇಧಿತ ಜಿಹಾದಿ ಸಂಘಟನೆಯ ಮಾಜಿ ಮುಖ್ಯಸ್ಥ ಈ. ಅಬೂಬಕರ್ ನ ಬಿಡುಗಡೆಗಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯವು ಮೇ ೨೮ ರಂದು ತಿರಸ್ಕರಿಸಿದೆ. ಅಬೂಬಕರ್ ನನ್ನು ಕೇಂದ್ರ ತನಿಖಾ ದಳ(ಎನ್ಐಎ) ೨೦೨೨ ರಂದು ಅಕ್ರಮ ಕೃತ್ಯಗಳು (ನಿಷೇಧಿತ) ಕಾನೂನಿನ ಅಡಿಯಲ್ಲಿ ಬಂಧಿಸಿತ್ತು. ಅದರ ನಂತರ ನ್ಯಾಯಾಲಯವು ಅವನನ್ನು ನ್ಯಾಯಾಲಯ ಬಂಧನಕ್ಕೆ ಕಳುಹಿಸಿತ್ತು. ೨೦೨೨ ರಲ್ಲಿ ಎನ್.ಐ.ಎ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಬೃಹತ್ ಪ್ರಮಾಣದ ಕಾರ್ಯಾಚರಣೆ ಆರಂಭಿಸಿತ್ತು.
ಕಿರಿಯ ನ್ಯಾಯಾಲಯದ ನಿರ್ಣಯ ಗ್ರಾಹ್ಯ !
ಅಬೂಬಕರ್ ತನ್ನ ಜಾಮೀನಿಗಾಗಿ ಕಿರಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು, ಆದರೆ ಅಲ್ಲಿ ಅವನಿಗೆ ಸಮಾಧಾನ ಸಿಗಲಿಲ್ಲ. ಅದರ ನಂತರ ಅವನು ಕಿರಿಯ ನ್ಯಾಯಾಲಯದ ನಿರ್ಣಯವನ್ನು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದನು. ವೈದ್ಯಕೀಯ ಕಾರಣಕ್ಕಾಗಿ ಮಧ್ಯಾಂತರ ಜಾಮೀನು ನೀಡಬೇಕೆಂದು ಅರ್ಜಿಯಲ್ಲಿ ಆಗ್ರಹಿಸಿದ್ದನು. ನ್ಯಾಯಮೂರ್ತಿ ಸುರೇಶ ಕುಮಾರ ಕೈತ ಮತ್ತು ನ್ಯಾಯಮೂರ್ತಿ ಮನೋಜ್ ಜೈನ ಇವರ ಖಂಡಪೀಠದಿಂದ ಅವನ ಜಾಮೀನು ಅರ್ಜಿ ತಳ್ಳಿ ಹಾಕಲಾಯಿತು.
ಪಿ. ಎಫ್. ಐ. ಬಗ್ಗೆ ಗಂಭೀರ ಆರೋಪ !
ಎನ್.ಐ.ಎ. ತನ್ನ ಕಾರ್ಯಾಚರಣೆಯ ಸಮಯದಲ್ಲಿ, ಪಿ .ಎಫ್. ಐ. ನ ಭಯೋತ್ಪಾದಕರು ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ನಿಧಿ ಸಂಗ್ರಹಿಸುವ ಅಪರಾಧಿ ಷಡ್ಯಂತ್ರ ರೂಪಿಸಿದ್ದರು ಮತ್ತು ಭಯೋತ್ಪಾದಕರಿಗೆ ಪ್ರಶಿಕ್ಷಣ ನೀಡುತ್ತಿದ್ದರು ಎಂದು ಹೇಳಿದೆ.