`ಚೀನಾ 1962 ರಲ್ಲಿ ಭಾರತದ ಮೇಲೆ ದಾಳಿ ಮಾಡಿದ್ದು ಸುಳ್ಳು (ಅಂತೆ) !’ – ಮಣಿಶಂಕರ್ ಅಯ್ಯರ್

ಕಾಂಗ್ರೆಸ್ಸಿನ ಪಾಕಿಸ್ತಾನ ಪ್ರೇಮಿ ಮತ್ತು ಚೀನಾ ಪ್ರೇಮಿ ನಾಯಕ ಮಣಿಶಂಕರ್ ಅಯ್ಯರ್ ಇವರ ರಾಷ್ಟ್ರದ್ರೋಹಿ ಹೇಳಿಕೆ

ನವ ದೆಹಲಿ – 1962ರಲ್ಲಿ ಚೀನಾ ಭಾರತದ ಮೇಲೆ ನಡೆಸಿದ್ದ ದಾಳಿಗೆ ಕಾಂಗ್ರೆಸ್ಸಿನ ನಾಯಕ ಮಾಜಿ ಕೇಂದ್ರ ಸಚಿವ ಮಣಿಶಂಕರ್‌ ಅಯ್ಯರ್‌ ಅವರು ‘ಚೀನಾದ ತಥಾಕಥಿತ ದಾಳಿ‘ ಎಂದು ಹೇಳಿದ್ದರಿಂದ ವಿವಾದ ನಿರ್ಮಾಣವಾಗಿದೆ. ಈ ಪ್ರಕರಣದಲ್ಲಿ ಅಯ್ಯರ ಅವರಿಗೆ ನೆರೆದಿದ್ದವರು ಪ್ರಶ್ನಿಸಿದಾಗ ಅವರು ತಕ್ಷಣವೇ ಕ್ಷಮೆಯಾಚನೆ ಮಾಡಿದರು. ಇಲ್ಲಿಯ ‘ಫಾರೆನ ಕರಸ್ಪಾಂಡೆಂಟ್ಸ ಕ್ಲಬ’ ನಲ್ಲಿ `ನೆಹರೂಸ ಫಸ್ಟ ರಿಕ್ರೂಟ್ಸ’ ಈ ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಭಾಜಪ ಈ ಹೇಳಿಕೆಯ ಕುರಿತು ಕಾಂಗ್ರೆಸ್ಸನ್ನು ಟೀಕಿಸಿದೆ.

ಈ ಸಂದರ್ಭದಲ್ಲಿ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಶಾಖೆಯ ಅಮಿತ್ ಮಾಲವಿಯಾ ಅವರು ‘ಎಕ್ಸ’ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ನೆಹರೂ ಚೀನಾದಿಂದಾ ಭಾರತಕ್ಕೆ ದೊರಕಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಎಳ್ಳುನೀರು ಬಿಟ್ಟರು, ರಾಹುಲ ಗಾಂಧಿಯವರು ಚೀನಾದೊಂದಿಗೆ ಗುಪ್ತವಾಗಿ ರಾಜಿ ಒಪ್ಪಂದ ಮಾಡಿಕೊಳ್ಳುತ್ತಾರೆ, ರಾಜೀವ್ ಗಾಂಧಿ ಫೌಂಡೇಶನ್ ಚೀನೀ ರಾಯಭಾರ ಕಚೇರಿಯಿಂದ ಹಣವನ್ನು ಸ್ವೀಕರಿಸಿದೆ ಮತ್ತು ಚೀನಿ ಸಂಸ್ಥೆಗಳೀಗೆ ಭಾರತೀಯ ಮಾರುಕಟ್ಟೆಯನ್ನು ತೆರೆದಿದೆ. ಈಗ ಕಾಂಗ್ರೆಸ್ ನಾಯಕರು ಚೀನಾದ ಆಕ್ರಮಣದ ಇತಿಹಾಸವನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಚೀನಾ ಭಾರತದ 38 ಸಾವಿರ ಚದರ ಮೀಟರ್ ಭೂಮಿಯನ್ನು ಅಕ್ರಮವಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ.

ಅಯ್ಯರ್ ಅವರ ಯಾವುದೇ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ! – ಕಾಂಗ್ರೆಸ್

ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಜೈರಾಮ್ ರಮೇಶ್ ಇವರು ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯ ಬಗ್ಗೆ ಮಾತನಾಡಿ, ಅಯ್ಯರ ಇವರು, ‘ತಥಾಕಥಿತ ದಾಳಿ’ ಎಂಬ ಪದವನ್ನು ತಪ್ಪಾಗಿ ಬಳಸಿದ್ದರು. ಅದಕ್ಕಾಗಿ ಅವರು ತಕ್ಷಣವೇ ಕ್ಷಮೆಯಾಚಿಸಿದರು. ಅವರ ವಯಸ್ಸನ್ನು ನೋಡಿದರೆ, ಅವರಿಗೆ ನಾವು ವಿನಾಯತಿ ಕೊಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಅವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಣಿಶಂಕರ್ ಅಯ್ಯರ್ ನಿರಂತರವಾಗಿ ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿರುವಾಗ ಕಾಂಗ್ರೆಸ್ ತನ್ನನ್ನು ಅವರಿಂದ ದೂರವಿಡಲು ಪ್ರಯತ್ನಿಸುತ್ತಿರುತ್ತದೆ; ಆದರೆ ಅಯ್ಯರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ, ಎನ್ನುವುದನ್ನು ಗಮನಿಸಬೇಕಾಗಿದೆ !

ಚೀನಾದ ದಾಳಿಯ ನಂತರ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಮಯದಲ್ಲಿ ಅಂದಿನ ಪ್ರಧಾನಿ ನೆಹರೂ ಅವರು ಚೀನಾ ವಶಪಡಿಸಿಕೊಂಡ ಭಾರತದ ಭೂಮಿಗೆ ಸಂಬಂಧಿಸಿದಂತೆ, ‘ಅಲ್ಲಿ ಹುಲ್ಲೂ ಕೂಡ ಬೆಳೆಯುವುದಿಲ್ಲ.’ ಎಂದು ಹೇಳಿದ್ದರು. ಇದರಿಂದ ಕಾಂಗ್ರೆಸ್ಸಿಗರ ಮಾನಸಿಕತೆ ಗಮನಕ್ಕೆ ಬರುತ್ತದೆ !