Ban On ‘Zee’ Media In Punjab : ಪಂಜಾಬ್ ನಲ್ಲಿ ‘ಝೀ’ ಪ್ರಸಾರ ಮಾಧ್ಯಮದ ಎಲ್ಲಾ ಚಾನೆಲ್‌ಗಳು ಅಘೋಷಿತ ಸ್ಥಗಿತ !

‘ಝೀ’ ಸಂಸ್ಥೆಯಿಂದ ಆಮ್ ಆದ್ಮಿ ಪಕ್ಷದ ಸರಕಾರದ ಮೇಲೆ ಆರೋಪ

ನವದೆಹಲಿ – ಪಂಜಾಬ್ ನಲ್ಲಿ ‘ಝೀ’ ಪ್ರಸಾರ ಮಾಧ್ಯಮದ ಎಲ್ಲಾ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ. ವಾಹಿನಿಯೇ ಈ ಮಾಹಿತಿಯನ್ನು ನೀಡಿದೆ. ವಾಹಿನಿಯು ಹೇಳಿರುವುದೇನೆಂದರೆ, ‘ಪಂಜಾಬ್‌ನಲ್ಲಿ ‘ಜೀ ಮೀಡಿಯಾ’ದ ಎಲ್ಲಾ ವಾಹಿನಿಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲಿನ ಜನರ ಮನೆಗಳಲ್ಲಿ ಝೀ ವಾಹಿನಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. ಪಂಜಾಬ್ ನಲ್ಲಿ ಆಪ್ (ಆಮ್ ಆದ್ಮಿ ಪಕ್ಷ) ಸರಕಾರ ಇದೆ ಮತ್ತು ಭಗವಂತ್ ಮಾನ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾರೆ.

1. ಭಾಜಪ ನಾಯಕ ಮಂಜಿಂದರ್ ಸಿಂಗ್ ಸಿರಸಾ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಆದರೆ ಅವರ ವಿರುದ್ಧ ಯಾರಾದರೂ ಸತ್ಯವನ್ನು ತೋರಿಸಿದರೆ, ಅವರು ಅದನ್ನು ಮುಚ್ಚಿ ಬಿಡುತ್ತಾರೆ.

2. ಜನತಾದಳ (ಸಂಯುಕ್ತ) ಪಕ್ಷದ ವಕ್ತಾರ ಕೆ.ಸಿ. ತ್ಯಾಗಿಯವರು ಇದನ್ನು ತಿರಸ್ಕರಿಸಿದರು ಮತ್ತು ಮಾತನಾಡುತ್ತಾ ಆಪ್ ಪಕ್ಷ ಪ್ರಸಾರ ಮಾಧ್ಯಮಗಳ ನೆಚ್ಚಿನ ಪಕ್ಷವೆಂದು ಹೊರಹೊಮ್ಮಿದೆ ಎಂದರು. ದೆಹಲಿಯ ರಾಮಲೀಲಾ ಮೈದಾನದ ಆಂದೋಲನದ ಸಮಯದಲ್ಲಿ ಪ್ರಸಾರ ಮಾಧ್ಯಮಗಳು ಅವರಿಗೆ ಸಾಕಷ್ಟು ಖ್ಯಾತಿಯನ್ನು ನೀಡಿದ್ದವು.

ಸಂಪಾದಕೀಯ ನಿಲುವು

ಆಮ್ ಆದ್ಮಿ ಪಕ್ಷದ ಸರಕಾರದ ಸರ್ವಾಧಿಕಾರತ್ವ ! ಇದೇ ಪಕ್ಷ ಅಭಿವ್ಯಕ್ತಿ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುತ್ತದೆ, ಇದು ಅತ್ಯಂತ ಶೋಚನೀಯ !