ಬಂಧನದಲ್ಲಿರುವರು ಅಮಾಯಕರು ಬಿಡುಗಡೆ ಮಾಡಿ !'(ಅಂತೆ) – ಆದಿಲನ ತಂದೆ ಮತ್ತು ಸಹೋದರಿಯ ಮನವಿ !

ಪೊಲೀಸರ ವಶದಲ್ಲಿರುವ ಆದಿಲನ ಸಾವಿನಿಂದ ಪೊಲೀಸ ಠಾಣೆಯ ಮೇಲೆ ನಡೆದ ಹಲ್ಲೆಯ ಪ್ರಕಾರಣ

ದಾವಣಗೆರೆ – ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸರ ವಶದಲ್ಲಿದ್ದ ಆದಿಲನ ಸಾವಿನ ನಂತರ ಮುಸಲ್ಮಾನರು ಪೊಲೀಸ ಠಾಣೆಯ ಮೇಲೆ ಹಲ್ಲೆ ನಡೆಸಿದ್ದರು. ಹಾಗೆ ಇಲ್ಲಿಯ ವಾಹನಗಳನ್ನು ಧ್ವಂಸ ಗೊಳಿಸಿದ್ದರು. ಈ ಪ್ರಕರಣದಲ್ಲಿ ಬಂಧಿಸಲಾಗಿರುವ ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕೆಂದು ಆದಿಲನ ತಂದೆ ಮತ್ತು ಸಹೋದರಿ ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ೨೫ ಜನರನ್ನು ಬಂಧಿಸಲಾಗಿದೆ. ಬಂಧನದಲ್ಲಿರುವವರು ಚೆನ್ನಗಿರಿ, ಹೊನ್ನೇಬಾಗಿ, ಮತ್ತು ನಲ್ಲೂರು ಈ ಗ್ರಾಮದವರಾಗಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಮೂಲಕ ಮಾಡಿರುವ ಚಿತ್ರೀಕರಣ ಮತ್ತು ಇತರ ವಿಡಿಯೋದ ಮೂಲಕ ಆರೋಪಿಗಳನ್ನು ಗುರುತಿಸಿ ಅವರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಪೊಲೀಸ ಠಾಣೆಯ ಮೇಲೆ ಹಲ್ಲೆ ಮಾಡಿದವರು ‘ಅಮಾಯಕರು’ ಎಂದು ಹೇಳುತ್ತಾ ಅವರನ್ನು ಬಿಡುಗಡೆಗೊಳಿಸಲು ಆಗ್ರಹಿಸುವವರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು !