ಆ್ಯಪ್ ಮೂಲಕ, ಮಹಿಳಾ ಅಧಿಕಾರಿಯ ಧ್ವನಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳನ್ನು ನಿರ್ಜನ ಸ್ಥಳಕ್ಕೆ ಕರೆಯಲಾಗುತ್ತಿತ್ತು !
ಭೋಪಾಲ್ (ಮಧ್ಯ ಪ್ರದೇಶ) – ರಾಜ್ಯದ ಸಿಧಿ ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆಯಲ್ಲಿ ಧ್ವನಿ ಬದಲಾಯಿಸಿ ಒಂದು ‘ಆ್ಯಪ್’ ಉಪಯೋಗಿಸಿ ಕೆಲವು ಸಿಬ್ಬಂದಿಗಳು ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ನೀಡುವ ಆಮಿಷ ತೋರಿಸಿ ಅವರ ಮೇಲೆ ಬಲಾತ್ಕಾರ ಮಾಡಿದರು. ಈ ಪ್ರಕರಣದಲ್ಲಿ ಬ್ರಿಜೇಶ್ ಪ್ರಜಾಪತಿ, ರಾಹುಲ್ ಪ್ರಜಾಪತಿ, ಲವಕುಶ ಪ್ರಜಾಪತಿ ಮತ್ತು ಸಂದೀಪ ಪ್ರಜಾಪತಿ ಈ ೪ ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಿಗೇಷ್ ಯುಟ್ಯೂಬ್ ನಿಂದ ಧ್ವನಿ ಬದಲಾವಣೇಯ ಬಗ್ಗೆ ಮಾಹಿತಿ ಪಡೆದು ಕಾಲೇಜಿನಲ್ಲಿನ ವಿದ್ಯಾರ್ಥಿನಿಯರನ್ನು ಬಲೆಗೆ ಸಿಲುಕಿಸುತ್ತಿದ್ದನು. ಧ್ವನಿ ಬದಲಾವಣೆ ಆ್ಯಪ್ ಉಪಯೋಗಿಸಿ ಜಿಲ್ಲೆಯಲ್ಲಿನ ‘ಸಂಜಯ ಗಾಂಧಿ ಮಹಾವಿದ್ಯಾಲಯ’ದ ಉನ್ನತ ಸ್ಥಾನದ ಮಹಿಳಾ ಅಧಿಕಾರಿ ರಂಜನಾ ಇವರ ಧ್ವನಿಯಲ್ಲಿ ವಿದ್ಯಾರ್ಥಿನಿಯರನ್ನು ಸಂಪರ್ಕಿಸುತ್ತಿದ್ದನು. ವಿದ್ಯಾರ್ಥಿನಿಯರ ವಿಶ್ವಾಸ ಪಡೆದ ನಂತರ ಅವರಿಗೆ ಸ್ಕಾಲರ್ಶಿಪ್ ಆಮಿಷ ತೋರಿಸಿ ದಾಖಲೆ ಪಡೆಯುವ ನೆಪದಲ್ಲಿ ಅವರನ್ನು ವಿಶಿಷ್ಟ ಸ್ಥಳಕ್ಕೆ ಕರೆಸುತ್ತಿದ್ದನು. ವಿದ್ಯಾರ್ಥಿನಿಯರು ಅಲ್ಲಿ ಬಂದ ನಂತರ ಅವರನ್ನು ದ್ವಿಚಕ್ರ ವಾಹನದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದರು.
ಈ ಪ್ರಕರಣದ ಬಗ್ಗೆ ಮಜೋಲಿ ಪೊಲೀಸ್ ಠಾಣೆಗೆ ಓರ್ವ ಮಹಿಳೆಯ ಕರೆ ಬಂದಿತು. ದೊರೆತಿರುವ ದೂರಿನ ನಂತರ ಪೊಲೀಸರು ಬಲೆ ಬೀಸಿ ನಾಲ್ಕು ಜನರನ್ನು ಬಂಧಿಸಿದರು. ವಿಚಾರಣೆಯಲ್ಲಿ ಅವರು ೭ ವಿದ್ಯಾರ್ಥಿನಿಯರ ಮೇಲೆ ಬಲಾತ್ಕಾರ ಮಾಡಿರುವುದನ್ನು ಒಪ್ಪಿಕೊಂಡರು. ಈಗ ಈ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯರು ಮುಂದೆ ಬಂದು ಮಾಹಿತಿ ನೀಡುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಮಧ್ಯಪ್ರದೇಶ ಪೊಲೀಸರು ಪ್ರಯತ್ನಿಸಬೇಕು ! |