ರಾಜ್‌ಕೋಟ್ (ಗುಜರಾತ್) – ಇಲ್ಲಿನ ‘ಟಿ.ಆರ್.ಪಿ. ಗೇಮಿಂಗ್ ಝೋನ್’ ಪ್ರದೇಶದಲ್ಲಿ ಮೇ 25 ರಂದು ಮಧ್ಯಾಹ್ನ ‘ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ 12 ಮಕ್ಕಳು ಸೇರಿದಂತೆ 28 ಜನರು ಸಾವನ್ನಪ್ಪಿದರು. ಇಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹತ್ತಿದ ನಂತರ 25 ಜನರನ್ನು ಹೊರ ತರಲಾಯಿತು; ಆದರೆ ಅಷ್ಟರಲ್ಲಾಗಲೇ ಅನೇಕ ಮಕ್ಕಳು ಸೇರಿದಂತೆ ಕೆಲವರು ಸಜೀವ ದಹನವಾದರು.
ಈ ಪ್ರಕರಣದಲ್ಲಿ ‘ಗೇಮಿಂಗ್ ಝೋನ್’ನ ಮಾಲೀಕ ಹಾಗೂ ಅದರ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ‘ಗೇಮಿಂಗ್ ಝೋನ್’ ನಡೆಸಲು ಮಾಲೀಕರು ಅಗ್ನಿಶಾಮಕ ದಳದಿಂದ ಅನುಮತಿ ಪಡೆದಿರಲಿಲ್ಲ. ಹೊರಗಿನ ತಾಪಮಾನ ಹೆಚ್ಚಿರುವ ಕಾರಣ ‘ಗೇಮಿಂಗ್ ಝೋನ್’ನಲ್ಲಿನ ಹವಾನಿಯಂತ್ರಣ ವ್ಯವಸ್ಥೆಯ ವೈರಿಂಗ್‌ನಲ್ಲಿ ಹೆಚ್ಚುವರಿ ಒತ್ತಡ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬಹುದು ಎಂದು ರಾಜಕೋಟ್ ಜಿಲ್ಲಾಧಿಕಾರಿ ಪ್ರಭಾವ್ ಜೋಶಿ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.