Uniform Civil Code : ಉತ್ತರಾಖಂಡದಿಂದ ಸಮಾನ ನಾಗರಿಕ ಕಾನೂನಿನ ‘ಗಂಗೆ’ ಹರಿಸಲು ಪ್ರಾರಂಭ ! – ಮುಖ್ಯಮಂತ್ರಿ ಧಾಮಿ

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ನವದೆಹಲಿ – ದೇವಭೂಮಿ ಉತ್ತರಾಖಂಡದಿಂದ ಗಂಗೆಯು ಸಂಪೂರ್ಣ ದೇಶದಲ್ಲಿ ಹರಿಯುತ್ತದೆ, ಅದೇ ರೀತಿಯಲ್ಲಿ ಸಮಾನ ನಾಗರಿಕ ಕಾನೂನಿನ ‘ಗಂಗೆ’ ಉತ್ತರಾಖಂಡದಿಂದ ಹರಿಯಲು ಪ್ರಾರಂಭಿಸಿದ್ದಾಳೆ. ಸಂರಕ್ಷಣೆ ಮತ್ತು ನಂಬಿಕೆಯನ್ನು ಆಧರಿಸಿದ ಈ ಕಾನೂನು ಅತ್ಯಂತ ಮಹತ್ವದ್ದಾಗಿದೆ, ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ ಅವರು ಹೇಳಿಕೆ ನೀಡಿದ್ದಾರೆ. ಅವರು ಒಂದು ಹಿಂದಿ ಸುದ್ದಿ ವಾಹಿನಿಯ ಜೊತೆ ಮಾತನಾಡುತ್ತಿದ್ದರು. ಧರ್ಮದ ಆಧಾರದ ಮೇಲೆ ಮೀಸಲಾತಿಯ ಭರವಸೆ ನೀಡುವುದು, ಇದು ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂದು ಒಂದು ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು.