Eric Garcetti Minorities In Democracy : ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರನ್ನು ಸಮಾನವಾಗಿ ಪರಿಗಣಿಸಬೇಕಂತೆ ! – ಎರಿಕ್ ಗಾರ್ಸೆಟಿ

ಭಾರತದಲ್ಲಿನ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಹೇಳಿಕೆ !

ಎರಿಕ್ ಗಾರ್ಸೆಟಿ

ಮುಂಬಯಿ – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರನ್ನು ಸಮಾಜದ ಎಲ್ಲಾ ಜನರು ಸಮಾನವಾಗಿ ನೋಡಿಕೊಳ್ಳುತ್ತಿದ್ದಾರೆಯೇ ? ಎಂಬುದನ್ನು ಗಮನಿಸಬೇಕು. ನಮ್ಮ ಮನಸ್ಸಿನಲ್ಲಿ ಸಮಾನ ವರ್ತನೆಯ ಭಾವನೆ ಇರುವುದು ಅತ್ಯಾವಶ್ಯಕವಾಗಿದೆ. ಸಮಾನತೆ, ವಿವಿಧತೆ ಮತ್ತು ಐಕ್ಯತೆ ಈ ತತ್ವಗಳು ಕೇವಲ ಚುನಾವಣೆಯ ಭಾಗವಾಗಲು ಸಾಧ್ಯವಿಲ್ಲ ಅದು ಶಾಶ್ವತವಾಗಿ ಇರಬೇಕು, ಎಂದು ಭಾರತದಲ್ಲಿನ ಅಮೇರಿಕಾ ರಾಯಭಾರಿ ಎರಿಕ್ ಗಾರ್ಸೆಟಿ ಅವರು ಹೇಳಿದರು. ಉದ್ಯೋಗದ ಸಂದರ್ಭದಲ್ಲಿ ಅಮೇರಿಕ ರಾಯಭಾರಿಗಳ ವತಿಯಿಂದ ಮುಂಬಯಿ ಅಲ್ಲಿ ಒಂದು ವಿಶೇಷ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಆಗ ಗಾರ್ಸೆಟಿ ಮಾತನಾಡುತ್ತಿದ್ದರು.

ಗಾರ್ಸೆಟಿ ತಮ್ಮ ಮಾತನ್ನು ಮುಂದುವರಿಸಿ, ಪ್ರಜಾಪ್ರಭುತ್ವ ಹೇಗೆ ಕಾಪಾಡಬೇಕು ? ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಭಾರತೀಯ ನಾಗರಿಕರು ಅವರ ಪ್ರಜಾಪ್ರಭುತ್ವದ ಕಾಳಜಿ ವಹಿಸುವರು ಎಂದರು.

ಸಂಪಾದಕೀಯ ನಿಲುವು

ಭಾರತ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಡೆಸಲು ಸಕ್ಷಮವಾಗಿದೆ. ಆದ್ದರಿಂದ ಭಾರತಕ್ಕೆ ಉಪದೇಶ ನೀಡುವ ಬದಲು ತಮ್ಮ ದೇಶದಲ್ಲಿನ ಕಪ್ಪು ವರ್ಣಿಯರ ಮೇಲೆ ನಡೆಯುವ ದಾಳಿಯ ಕುರಿತು ಗಾರ್ಸೆಟಿ ಆತ್ಮ ನಿರೀಕ್ಷಣೆ ಮಾಡಿಕೊಳ್ಳಬೇಕು. ಭಾರತವು ಅಮೇರಿಕದ ಪ್ರಜಾಪ್ರಭುತ್ವದ ದುರ್ದಶೆ ತೋರಿಸುವ ವರದಿಯನ್ನು ಬಹಿರಂಗಗೊಳಿಸಬೇಕು.