ಚುನಾವಣಾ ಫಲಿತಾಂಶದ ಬಗ್ಗೆ ಪ್ರಶಾಂತ ಕಿಶೋರ್ ಮತ್ತು ಅಮೇರಿಕದ ರಾಜಕೀಯ ವಿಶ್ಲೇಷಕ ಇಯಾನ್ ಬ್ರೇಮರ್ ಅವರ ಭವಿಷ್ಯ
ನವದೆಹಲಿ – ಲೋಕಸಭಾ ಚುನಾವಣೆಯ ತೀರ್ಪು ಜೂನ್ ೪ ಕ್ಕೆ ಬರಲಿದ್ದು ಇಲ್ಲಿಯವರೆಗೆ ದೇಶದಲ್ಲಿ ೫ ಹಂತಗಳ ಮತದಾನ ಪೂರ್ಣಗೊಂಡಿವೆ. ೫ ಹಂತಗಳಲ್ಲಿನ ಮತದಾನದ ಕುರಿತು ಯಾವ ಪಕ್ಷಕ್ಕೆ ಬಹುಮತ ಅಥವಾ ಹೆಚ್ಚು ಸ್ಥಾನ ದೊರೆಯುವುದು ಇದರ ಚರ್ಚೆ ಆರಂಭವಾಗಿದೆ. ಇದರ ಹಿನ್ನೆಲೆಯಲ್ಲಿ ಪ್ರಸಿದ್ಧ ರಾಜಕೀಯ ವಿಶ್ಲೇಷಕ ಮತ್ತು ತಂತ್ರಗಾರ ಪ್ರಶಾಂತ ಕಿಶೋರ್ ಅವರು ಭವಿಷ್ಯ ನುಡಿದಿದ್ದಾರೆ. ಅವರ ಅಂದಾಜಿನ ಪ್ರಕಾರ ಬಿಜೆಪಿಗೆ ೩೦೦ ಕ್ಕಿಂತಲೂ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ೨೮೨, ಹಾಗೂ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೩೦೩ ಸ್ಥಾನಗಳನ್ನು ಗೆದ್ದಿತ್ತು.
ಪ್ರಶಾಂತ ಕಿಶೋರ್ ಅವರು ಈ ಭವಿಷ್ಯ ನುಡಿದ ಬೆನ್ನಲ್ಲೇ ಅಮೇರಿಕಾದಲ್ಲಿನ ವಿಶ್ಲೇಷಕರು ಕೂಡ ಭಾರತದ ಚುನಾವಣೆಯ ಬಗ್ಗೆ ತಮ್ಮ ಭವಿಷ್ಯ ಹೇಳಿದ್ದಾರೆ. ಅಮೇರಿಕಾದ ಚುನಾವಣಾ ಅಧ್ಯಯನಕಾರರು, ರಾಜಕೀಯ ಸಂಶೋಧಕರು ಹಾಗೂ ತಂತ್ರಗಾರ ಇಯಾನ್ ಬ್ರೇಮರ್ ಅವರು ಭಾರತದ ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಬಿಜೆಪಿಗೆ ೩೦೫ ಕ್ಕಿಂತಲೂ ೧೦ ಹೆಚ್ಚು ಅಥವಾ ಕಡಿಮೆ ಸ್ಥಾನಗಳು ದೊರೆಯುವುದು ಎಂದು ಹೇಳಿದ್ದಾರೆ. ಅಂದರೆ ಬಿಜೆಪಿ ಗರಿಷ್ಟ ೩೧೫ ಅಥವಾ ಕನಿಷ್ಠ ೨೯೫ ಸ್ಥಾನಗಳನ್ನು ಗೆಲ್ಲಬಹುದು ಎಂದಿದ್ದಾರೆ.
ಬ್ರೇಮರ್ ಅವರು ಮಾತನಾಡಿ, ಜಗತ್ತಿನ ಅನ್ಯ ದೇಶಗಳ ಚುನಾವಣೆಗಳನ್ನು ಅಧ್ಯಯನ ನಡೆಸಿದಾಗ ಗಮನಕ್ಕೆ ಬರುವುದು ಏನೆಂದರೆ, ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಸ್ಥಿರ ವಾತಾವರಣದಲ್ಲಿ ನಡೆಯುತ್ತಿದೆ. ಜಗತ್ತಿನಲ್ಲಿನ ಇತರ ದೇಶಗಳ ಚುನಾವಣೆಯಲ್ಲಿ ದೊಡ್ಡ ಗೊಂದಲ ನೋಡಲು ಸಿಗುತ್ತದೆ. ಆ ಚುನಾವಣೆಗಳಲ್ಲಿ ನಾವು ಅನೇಕ ಸಮಸ್ಯೆಗಳನ್ನು ನೋಡಿದ್ದೇವೆ. ಜಗತ್ತಿನ ಬಹಳಷ್ಟು ದೇಶಗಳಲ್ಲಿ ಭೂ ರಾಜಕೀಯ (ಜಿಯೋ ಪಾಲಿಟಿಕಲ್) ಅಸ್ಥಿರತೆ ನೋಡಲು ಸಿಗುತ್ತದೆ. ದೊಡ್ಡ ದೊಡ್ಡ ಅಂತರಾಷ್ಟ್ರೀಯ ಕಂಪನಿಗಳಿಗೆ ಅಪೇಕ್ಷಿತವಿರುವ ಜಾಗತೀಕರಣದ ಭವಿಷ್ಯ ಈಗಾದರೂ ಕಾಣುತ್ತಿಲ್ಲ. ಜಾಗತೀಕರಣ ಮಾರುಕಟ್ಟೆಯಲ್ಲಿ ರಾಜಕಾರಣ ಪ್ರವೇಶ ಪಡೆದಿದೆ ಎಂದರು.