ಕರ್ಣಾವತಿ: ಬಂಧಿತ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಂದ ಭಾರತದಲ್ಲಿ ದಾಳಿಯ ಸಂಚು

ಬಂಧಿತರು ಶ್ರೀಲಂಕಾದ ನಾಗರಿಕರಾಗಿರುವ ಮಾಹಿತಿ !

ಕರ್ಣಾವತಿ (ಗುಜರಾತ) – ಎರಡು ದಿನಗಳ ಹಿಂದೆ ನಗರದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿರುವ ಇಸ್ಲಾಮಿಕ್ ಸ್ಟೇಟ್ ನ ನಾಲ್ವರು ಭಯೋತ್ಪಾದಕರು ಭಾರತದಲ್ಲಿ ದಾಳಿ ನಡೆಸಲು ಷಡ್ಯಂತ್ರ ರೂಪಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರು ಶ್ರೀಲಂಕಾದ ನಾಗರೀಕರಾಗಿದ್ದು ಪಾಕಿಸ್ತಾನದ ಹ್ಯಾಂಡಲರ್ ನ ಸಂಪರ್ಕದಲ್ಲಿದರು ಎಂದು ಮಾಹಿತಿ ನೀಡಿದ್ದಾರೆ. ಕರ್ಣಾವತಿ ನಗರದಲ್ಲಿ ಅವರಿಗಾಗಿ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದ್ದವು. ಅವನ್ನು ಪಡೆದ ಬಳಿಕ ಎಲ್ಲಿ ಹಾಗೂ ಹೇಗೆ ದಾಳಿ ಮಾಡಬೇಕು ಎಂದು ಸೂಚನೆ ಬರಲಿತ್ತು. ಈ ನಾಲ್ಕರ ಮೊಬೈಲ್ ನಲ್ಲಿ ಸಿಕ್ಕ ಭೌಗೋಳಿಕ ಸೂಚಕಗಳ ಆಧಾರದ ಮೇಲೆ ನಗರದಲ್ಲಿನ ಒಂದು ಸ್ಥಳದಿಂದ ೩ ಪಿಸ್ತೂಲುಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುಜರಾತಿನ ಪೊಲೀಸ್ ಮಹಾ ಸಂಚಾಲಕರಾದ ವಿಕಾಸ್ ಸಹಾಯ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಮಹಮ್ಮದ್ ನಸರತ್, ಮಹಮ್ಮದ್ ನಫ್ರಾನ್, ಮಹಮ್ಮದ್ ಫಾರೀಸ್ ಮತ್ತು ಮಹಮ್ಮದ್ ರಜದೀನ್ ಎಂದು ಈ ಭಯೋತ್ಪಾದಕರ ಹೆಸರುಗಳಾಗಿವೆ. ಈ ನಾಲ್ಕು ಜನರು ಚೆನ್ನೈಯಿಂದ ಕರ್ಣಾವತಿಗೆ ವಿಮಾನದಿಂದ ಬಂದಿದ್ದರು. ಈ ನಾಲ್ಕು ಜನರ ಬಂಧನದ ಎರಡನೆಯ ದಿನ ಅಂದರೆ ಮೇ ೨೧ರಂದು ಕರ್ಣಾವತಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನಡೆದಿತ್ತು. ಈ ದೃಷ್ಟಿಯಿಂದ ಈ ಕಾರ್ಯಾಚರಣೆ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ಇದರಿಂದ ಜಿಹಾದಿ ಭಯೋತ್ಪಾದಕರು ದೇಶದ ಮತ್ತು ಹಿಂದುಗಳ ಸಂಪೂರ್ಣ ನಾಶ ಮಾಡಲು ಬಯಸುತ್ತಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಸರಕಾರವು ಇಂತಹ ಭಯೋತ್ಪಾದಕರು ಹಾಗೂ ಅವರಿಗೆ ಸಹಾಯ ಮಾಡುವವರ ಮೇಲೆ ಕೂಡ ಅಂಕುಶ ಹಾಕಬೇಕು.