ನಿವೃತ್ತಿ ನಿಮಿತ್ತ ಆಯೋಜಿಸಲಾದ ಸಮಾರಂಭದಲ್ಲಿ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ರವರ ಹೇಳಿಕೆ
ಕೊಲಕಾತಾ – ಕೊಲಕಾತಾ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಅವರು ಮೇ 20, 2024 ರಂದು ನಿವೃತ್ತರಾದರು. ಈ ನಿಮಿತ್ತ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮನೋಗತ ವ್ಯಕ್ತ ಮಾಡುವಾಗ ಅವರು, ‘ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯನಿದ್ದೇನೆ. ರಾಷ್ಟ್ರೀಯ ಸ್ವಯಂ ಸಂಘವು ನನ್ನನ್ನು ಯಾವುದೇ ಸಹಾಯ ಅಥವಾ ಸೇವೆಗಾಗಿ ಕರೆದರೆ, ನಾನು ಸಂಘಟನೆಗೆ ಹಿಂತಿರುಗುವುದು ಖಚಿತ’, ಎಂದರು.
ಕೆಲಸದಿಂದಾಗಿ ರಾ. ಸ್ವ. ಸಂಘದಿಂದ 37 ವರ್ಷ ದೂರ !
ನ್ಯಾಯಮೂರ್ತಿ ದಾಸ್ ಮಾತನಾಡಿ, ”ನನಗೆ ರಾ. ಸ್ವ. ಸಂಘದ ಬಗ್ಗೆ ಅಪಾರ ಗೌರವವಿದೆ. ನಾನು ಸಂಘದಲ್ಲಿ ಚಿಕ್ಕಂದಿನಿಂದ ದೊಡ್ಡ ವನಾಗಿರುವೆ. ನಾನು ರಾ. ಸ್ವ. ಸಂಘದಿಂದ ಧೈರ್ಯ, ಪ್ರಾಮಾಣಿಕತೆ, ಸಮಚಿತ್ತತೆ, ದೇಶಭಕ್ತಿ, ಕಾರ್ಯ ವಿಷಯದಲ್ಲಿ ವಚನಬದ್ಧತೆ ಇತ್ಯಾದಿ ಗುಣಗಳನ್ನು ಕಲಿತೆನು. ಕೆಲಸದ ಕಾರಣ, ನಾನು 37 ವರ್ಷಗಳಿಂದ ರಾ. ಸ್ವ. ಸಂಘದಿಂದ ದೂರ ಇದ್ದೆನು. ನನ್ನ ವೃತ್ತಿಜೀವನದಲ್ಲಿ ಪದೋನ್ನತಿಗಾಗಿ ಎಂದಿಗೂ ಸಂಘದ ಹೆಸರನ್ನು ಬಳಸಿಲ್ಲ; ಏಕೆಂದರೆ ಹಾಗೆ ಮಾಡುವುದು ಸಂಘದ ತತ್ವಕ್ಕೆ ವಿರುದ್ಧವಾಗಿದೆ. ಕೆಲಸದಲ್ಲಿದ್ದಾಗ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದೆ. ಪ್ರತಿಯೊಬ್ಬರೂ
ನನಗೆ ಒಂದೇ ಆಗಿದ್ದರು. ನಾನು ಯಾರಿಗೂ ತಾರತಮ್ಯ ಮಾಡಿಲ್ಲ.” ಎಂದು ಹೇಳಿದರು.