Heatwaves Across India: ಮುಂದಿನ 5 ದಿನಗಳಲ್ಲಿ ದೆಹಲಿ ಸೇರಿದಂತೆ ದೇಶದ 9 ರಾಜ್ಯಗಳಲ್ಲಿ ಉಷ್ಣತೆಯ ಅಲೆ !

ಗೋವಾದಲ್ಲಿ ಬಿಸಿಲಿನ ತಾಪ ಹೆಚ್ಚಳ, ಕರ್ನಾಟಕದಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ !

ನವ ದೆಹಲಿ – ದೇಶದಲ್ಲಿ ಬಿಸಿಲಿನ ತಾಪದಿಂದ ಹಾಹಾಕಾರವೆದ್ದಿದೆ. ಭಾರತೀಯ ಹವಾಮಾನ ಇಲಾಖೆಯು ದೆಹಲಿ ಸೇರಿದಂತೆ 9 ರಾಜ್ಯಗಳಲ್ಲಿ ಮುಂದಿನ 5 ದಿನಗಳ ಕಾಲ ಉಷ್ಣತೆಯ ಅಲೆ ಬೀಸುವ ಎಚ್ಚರಿಕೆಯನ್ನು ನೀಡಿದೆ. ಇವುಗಳಲ್ಲಿ ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಬಿಹಾರ ಮತ್ತು ಬಂಗಾಳ ಈ ರಾಜ್ಯಗಳು ಸೇರಿವೆ. ಇದಲ್ಲದೇ ಅಸ್ಸಾಂ, ತ್ರಿಪುರಾ, ಒಡಿಶಾ, ಜಾರ್ಖಂಡ್ ಮತ್ತು ಗೋವಾ ರಾಜ್ಯಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಸಾಧ್ಯತೆ ಇದೆ.

ಮೇ 17 ರಂದು, 9 ರಾಜ್ಯಗಳ ಅನೇಕ ನಗರಗಳಲ್ಲಿ ಉಷ್ಣತೆಯ ಅಲೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ತಾಪಮಾನವು 43 ರಿಂದ 46 ಡಿಗ್ರಿಗಳವರೆಗೆ ದಾಖಲಾಗಿದೆ. ಆಗ್ರಾದಲ್ಲಿ ಗರಿಷ್ಠ ತಾಪಮಾನ 46.9 ಡಿಗ್ರಿ ತಲುಪಿತ್ತು.

ದಕ್ಷಿಣ ಭಾರತದಲ್ಲಿ ಧಾರಾಕಾರ ಮಳೆಯ ಲಕ್ಷಣ !

ದಕ್ಷಿಣ ಭಾರತದ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮುಂದಿನ 5 ದಿನ ಧಾರಾಕಾರ ಮಳೆಯಾಗಲಿದೆ. ಮೇ 20 ರಿಂದ ಕರ್ನಾಟಕದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೇ 17 ರಿಂದ 21 ರವರೆಗೆ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ.