ಬುಲ್ಡೋಜರ್ ಅನ್ನು ಎಲ್ಲಿ ಓಡಿಸಬೇಕು ಎಂದು ಯೋಗಿ ಆದಿತ್ಯನಾಥ್ ಇವರಿಂದ ಕಲಿಯಬೇಕು!

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ವಿರೋಧ ಪಕ್ಷಗಳಿಗೆ `ಸಲಹೆ’

ಬಾರಾಬಂಕಿ (ಉತ್ತರ ಪ್ರದೇಶ) – ಇಲ್ಲಿಯ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ಬುಲ್ಡೋಜ಼ರ್ ಓಡಿಸಬಹುದು ಎಂದು ಹೇಳಿದ್ದಾರೆ. ‘ಬುಲ್ಡೋಜ಼ರ್ ಅನ್ನು ಎಲ್ಲಿ ಓಡಿಸಬೇಕು ಎಂಬುದನ್ನು, ಈ ಜನರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಕಲಿಯಬೇಕು’, ಎಂದು ಅವರು ವ್ಯಂಗವಾಗಿ ಹೇಳಿದರು.

ಮೋದಿಯವರು ಮಂಡಿಸಿದ ಅಂಶಗಳು,

ಇಂಡಿ ಒಕ್ಕೂಟ ಅಶಾಂತಿಯನ್ನು ಸೃಷ್ಟಿಸುತ್ತಿದೆ !

ಭಾಜಪ ನೇತೃತ್ವದಲ್ಲಿ ಎನ್.ಡಿ.ಎ ಒಕ್ಕೂಟ ದೇಶದ ಹಿತಕ್ಕಾಗಿ ಶ್ರಮಿಸುತ್ತಿದೆ. ಆದರೆ ‘ಇಂಡಿ’ ಒಕ್ಕೂಟ ಅಶಾಂತಿ ಸೃಷ್ಟಿಸುತ್ತಿದೆ. ಚುನಾವಣೆ ಮುಂದುವರಿಯುತ್ತಿದ್ದಂತೆ ಇಂಡಿ ಒಕ್ಕೂಟ ಸದಸ್ಯರ ನಿಜರೂಪ ತಿಳಿಯುತ್ತಿದೆ. ದೇಶದಲ್ಲಿ ಅಸ್ಥಿರತೆ ನಿರ್ಮಾಣ ಮಾಡಲು ಇಂಡಿ ಒಕ್ಕೂಟ ಲೋಕಸಭೆ ಚುನಾವಣೆಯ ಕಣದಲ್ಲಿದೆ.