ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದ ಸಂತ್ರಸ್ತೆ

ಗದಗ – ವಿಧವೆ ಮುಸ್ಲಿಂ ಮಹಿಳೆಯ ಮೇಲೆ ಕೆಲವು ಮುಸಲ್ಮಾನ ಗೂಂಡಾಗಳು ಬಲಾತ್ಕಾರ ಮಾಡಿರುವುದಾಗಿ ದೂರು ನೀಡಲಾಗಿದೆ. ಈ ಗೂಂಡಾಗಳು ಸಂತ್ರಸ್ಥ ಮಹಿಳೆಯ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿರುವ ಬಗ್ಗೆಯೂ ದೂರಿನಲ್ಲಿ ಹೇಳಲಾಗಿದೆ. ಸಂತ್ರಸ್ಥೆ ಮಹಿಳೆಯು ಹಿಂದೂ ಪುರುಷನ ಜೊತೆ ಪ್ರೇಮ ವಿವಾಹವಾಗಿದ್ದಳು. ಆದರೆ ಮೂರು ವರ್ಷಗಳ ಹಿಂದೆ ಆಕೆಯ ಪತಿ ನಿಧನವಾಗಿದ್ದನು. ಲಿಯಾಕತ್, ಅಲ್ತಾಫ, ಸಯ್ಯದ್, ಸಮೀರ್, ರಿಯಾಜ್, ಜಾವೇದ್ ಎಂಬವರು ಮತ್ತು ಅನೇಕ ಮುಸಲ್ಮಾನರು ಮಹಿಳೆಯನ್ನು ಪೀಡಿಸುತ್ತಿದ್ದರು. ಕಿರುಕುಳಕ್ಕೊಳಗಾದ ಮಹಿಳೆಯು ಈ ಕುರಿತು ಪ್ರಶ್ನಿಸಿದಾಗ ಅವರು ಆ ಮಹಿಳೆಯ ಮೇಲೆ ದಾಳಿ ನಡೆಸಿ, ಆಕೆಯ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದರು.
ಸುದ್ದಿ ವಿಶೇಷ : ದೂರನ್ನು ನಿರ್ಲಕ್ಷಿಸಿದ ಪೊಲೀಸರು: ಮತ್ತೆ ದೂರು ನೀಡಿದರೆ ಬಂಧಿಸುವುದಾಗಿ ಬೆದರಿಕೆ
‘ನಮಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಸಂತ್ರಸ್ತ ಮಹಿಳೆ ಆಗ್ರಹಿಸಿದ್ದಾರೆ. ನನಗೆ ಸಾವಿನ ಬೆದರಿಕೆ ಹಾಕಿದ್ದಾರೆಂದು ಆಕೆ ಆರೋಪಿಸಿದ್ದಾಳೆ. ಈ ಪ್ರಕರಣದ ಸಂದರ್ಭದಲ್ಲಿ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಲಿಯಾಕತ್ ಮತ್ತು ಅಲ್ತಾಫ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ದೂರು ದಾಖಲಿಸಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲ, ಮತ್ತೊಮ್ಮೆ ದೂರು ನೀಡಿದರೆ ನಿನ್ನನ್ನು ಮತ್ತು ಮಕ್ಕಳನ್ನು ಜೈಲಿಗೆ ಹಾಕುತ್ತೇವೆ’ ಎಂದು ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವುಈ ಬಗ್ಗೆ ಮುಸ್ಲಿಂ ಮುಖಂಡರು ಮತ್ತು ಧಾರ್ಮಿಕ ಮುಖಂಡರು ಎಂದಿಗೂ ಬಾಯಿ ತೆರೆಯುವುದಿಲ್ಲ ಮತ್ತು ಕಪಟ ಜಾತ್ಯತೀತವಾದಿಗಳೂ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಡಿ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!