ಗ್ವಾಲಿಯರ್ ರಾಜ ಮನೆತನದ ರಾಜಮಾತೆ ಮಾಧವಿರಾಜೆ ಸಿಂಧಿಯಾ ನಿಧನ !

ರಾಜಮಾತೆ ಮಾಧವಿರಾಜೆ ಸಿಂಧಿಯಾ

ನವದೆಹಲಿ – ಗ್ವಾಲಿಯರ್ ರಾಜ ಮನೆತನದ ರಾಜಮಾತೆ ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಮಾಧವಿರಾಜೆ ಸಿಂಧಿಯಾ ಅವರು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮಾಧವಿರಾಜೆ ಅವರಿಗೆ ‘ನ್ಯುಮೋನಿಯಾ’ ಆಗಿತ್ತು. ಕಳೆದ 3 ತಿಂಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ರಾಜಧಾನಿಯ ‘ಏಮ್ಸ್ ‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾಧವಿರಾಜೆ ಅವರು ಕಾಂಗ್ರೆಸ್ಸಿನ ದಿವಂಗತ ನಾಯಕ ಮಾಧವರಾವ್ ಸಿಂಧಿಯಾ ಅವರ ಪತ್ನಿ.

ಮಾಧವಿರಾಜೆ ಸಿಂಧಿಯಾ ಅವರ ತವರು ನೇಪಾಳದ ರಾಜಮನೆತನದವರು. ಅವರ ತಾತ ಜುಡ್ ಸಂಶೇರ್ ಬಹದ್ದೂರ್ ನೇಪಾಳದ ಪ್ರಧಾನಿಯಾಗಿದ್ದರು. ಮಾಜಿ ಕೇಂದ್ರ ಸಚಿವ ಮಾಧವರಾವ್ ಸಿಂಧಿಯಾ 2001 ರಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು.