ನವ ದೆಹಲಿ – ನ್ಯಾಯವ್ಯವಸ್ಥೆಯಲ್ಲಿ ಆಧುನಿಕರಣ ಆಗಲೇಬೇಕು, ಹಾಗಾಗದಿದ್ದರೆ, ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಗತಿಯಲ್ಲಿ ದೊಡ್ಡ ಅಡಚಣೆಯಾಗುವುದು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಆರ್ಥಿಕ ಸಲಹೆಗಾರ ಪರಿಷತ್ತಿನ ಸದಸ್ಯ ಮತ್ತು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಸಂಜೀವ ಸನ್ಯಾಲ ಇವರು ಹೇಳಿಕೆ ನೀಡಿದರು. ಅವರು ಕಾಲೇಜಿಎಂ ವ್ಯವಸ್ಥೆಯಲ್ಲಿ ಕೂಡ ಬದಲಾವಣೆ ಮಾಡಲು ಕರೆ ನೀಡಿದ್ದಾರೆ. ಈ ಪದ್ಧತಿಯಿಂದ ದೊರೆತಿರುವ ಅಧಿಕಾರದಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ಇವರ ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಮಾಡುತ್ತಾರೆ. ಸನ್ಯಾಲ ಇವರು ನೌಕರಶಾಹಿಯಲ್ಲಿ ಸುಧಾರಣೆಯನ್ನು ಕೂಡ ಆಶಿಸಿದ್ದಾರೆ. ‘ಪ್ರಾಚ್ಯಮ್’ ಈ ಯೂಟ್ಯೂಬ್ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
(ಸೌಜನ್ಯ – Prachyam)
ಅವರು ತಮ್ಮ ಮಾತು ಮುಂದುವರೆಸುತ್ತಾ,
೧. ನಮಗೆ ನ್ಯಾಯವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕಾಗಬಹುದು, ಈ ‘ದಿನಾಂಕ ದಿಂದ ದಿನಾಂಕಕ್ಕೆ’ ಮುಂದುಡುವ ವ್ಯವಸ್ಥೆಯ ಯೋಜನೆ ಮಾಡಿ, ಏನಿದೆ ಇದು ? ನಾವು, ಈ ವ್ಯವಸ್ಥೆ ವಸಾಹತುಕಾಲದಿಂದ ಇದೆ ಎಂದು ಹೇಳುತ್ತೇವೆ. ೭೫ ವರ್ಷದಿಂದ ನಮ್ಮ ಬಳಿ ಅದೇ ವ್ಯವಸ್ಥೆ ಇದೆ.
೨. ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯಗಳು ಬೇಸಿಗೆಯ ರಜೆ ಪಡೆಯುತ್ತಾರೆ, ದಸರಾದ ರಜೆ ಪಡೆಯುತ್ತಾರೆ ಮತ್ತು ಕ್ರಿಸ್ಮಸ್ ರಜೆಗೆ ಹೋಗುತ್ತಾರೆ. ನ್ಯಾಯಾಧೀಶರು ಕೆಲವು ಗಂಟೆಗಳಷ್ಟೇ ಕೆಲಸ ಮಾಡುತ್ತಾರೆ. ಈ ಎಲ್ಲಾ ಹಳೆಯ ವ್ಯವಸ್ಥೆ ಬದಲಾಯಿಸಿ ಅದರ ಆಧುನಿಕರಣ ಮಾಡಬೇಕಾಗುವುದು.
೩. ನ್ಯಾಯಾಧೀಶರ ನೇಮಕದ ಪದ್ಧತಿಯಲ್ಲಿ ಸುಧಾರಣೆ ಮಾಡುವುದು ಆವಶ್ಯಕವಾಗಿದೆ. ಇಂದಿನ ಕಾಲೇಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರೇ ‘ಮುಂದಿನ ನ್ಯಾಯಾಧೀಶರು ಯಾರು ಇರುವರು ?’, ಇದನ್ನು ನಿರ್ಧರಿಸುತ್ತಾರೆ. ಆದ್ದರಿಂದ ಅವರ ಜನರೇ ನ್ಯಾಯಾಧೀಶ ಸ್ಥಾನದಲ್ಲಿ ವಿರಾಜಮಾನರಾಗುತ್ತಾರೆ. ನ್ಯಾಯಾಧೀಶರ ನೇಮಕ ಗುಣಮಟ್ಟದ ಮೇಲೆ ನಡೆಯಬೇಕು.
೪. ಆಧುನಿಕ ನ್ಯಾಯವ್ಯವಸ್ಥೆ ರೂಪಿಸಬೇಕಾಗುವುದು, ಇಲ್ಲವಾದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ, ‘ಮೈ ಲಾರ್ಡ್’, ‘ಯುವರ್ ಲಾರ್ಡ್’ ಹೇಳುವುದು ಮುಂದುವರಿಯುತ್ತದೆ.
೫. ಸರಕಾರ ಒಂದೇ ಇದೆಲ್ಲದರ ಕುರಿತು ಎಲ್ಲವೂ ಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ಸಂಪೂರ್ಣ ಸಮಾಜದಲ್ಲಿ ಚರ್ಚೆ ನಡೆಯಬೇಕು. ನಮ್ಮ ನ್ಯಾಯವ್ಯವಸ್ಥೆಯ ಹೊಸ ಪದ್ಧತಿ ಹೇಗೆ ರೂಪಿಸುವುದು ಇದರ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು.