200 Crore People Suffer From Anemia: ಜಗತ್ತಿನಲ್ಲಿ 200 ಕೋಟಿ ಜನರು ‘ಅನಿಮಿಯಾ’ದಿಂದ ಬಳಲುತ್ತಿದ್ದಾರೆ !

(ಅನಿಮಿಯಾ ಎಂದರೆ ರಕ್ತದಲ್ಲಿನ ಕಬ್ಬಿಣದ ಕೊರತೆ, ಅಂದರೆ ರಕ್ತದಲ್ಲಿ ಸಾಕಷ್ಟು ಹಿಮೋಗ್ಲೋಬಿನ್ ಅಥವಾ ಆರ್‌ಬಿಸಿಗಳಿಲ್ಲ)

ನವದೆಹಲಿ – ‘ಇನ್‌ಸ್ಟಿಟ್ಯೂಟ್‌ ಫಾರ್‌ ಹೆಲ್ತ್‌ ಮ್ಯಾಟ್ರಿಕ್ಸ್‌ ಅಂಡ್‌ ಇವಾಲ್ಯುಯೇಷನ್‌’ ಪ್ರಕಾರ, ವಿಶ್ವಾದ್ಯಂತ ಸುಮಾರು 200 ಕೋಟಿ ಜನರು ಅನಿಮಿಯಾದಿಂದ ಬಳಲುತ್ತಿದ್ದಾರೆ. ಈ ಅಂಕಿಅಂಶವು ಮಧುಮೇಹ ರೋಗಿಗಳಿಗಿಂತ ಹೆಚ್ಚು ಇದೆ. ಕಬ್ಬಿಣದ ಕೊರತೆಯಿಂದಾಗಿ, ದೇಹದ ಬೆಳವಣಿಗೆ ನಿಲ್ಲುತ್ತದೆ. ದೇಹದ ಅಂಗಗಳು ವಿಫಲವಾಗಬಹುದು. ಗರ್ಭಾವಸ್ಥೆಯಲ್ಲಿ ಕೂದಲು ಉದುರುವಿಕೆ ಸಂಭವಿಸುತ್ತದೆ ಮತ್ತು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

1. ಕಬ್ಬಿಣವು ವಿಶೇಷವಾದ ಖನಿಜವಾಗಿದೆ, ಇದು ನಮ್ಮ ದೇಹದ ಬೆಳವಣಿಗೆಗೆ ಅವಶ್ಯಕವಾಗಿದೆ. ನಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಕಬ್ಬಿಣದ ಸಹಾಯದಿಂದ ತಯಾರಾಗುತ್ತದೆ.

2. ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆ ಇದ್ದರೆ, ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ. ನಮ್ಮ ಸ್ನಾಯುಗಳು ಮಯೋಗ್ಲೋಬಿನ್ ಎಂಬ ವಿಶೇಷ ಪ್ರೋಟೀನ್ ಅನ್ನು ಹೊಂದಿರುತ್ತವೆ. ಈ ಪ್ರೋಟೀನ್ ಆಮ್ಲಜನಕವನ್ನು ಸಂಗ್ರಹಿಸುತ್ತದೆ ಮತ್ತು ಅಗತ್ಯವಿರುವಂತೆ ಸ್ನಾಯುಗಳಿಗೆ ತಲುಪಿಸುತ್ತದೆ.

3. ಮಯೋಗ್ಲೋಬಿನ್ ಅನ್ನು ತಯಾರಿಸುವಲ್ಲಿ ಕಬ್ಬಿಣವು ಪ್ರಮುಖ ಪಾತ್ರ ವಹಿಸುತ್ತದೆ, ಅನೇಕ ಹಾರ್ಮೋನುಗಳನ್ನು ತಯಾರಿಸಲು ನಮ್ಮ ದೇಹಕ್ಕೆ ಕಬ್ಬಿಣದ ಅಗತ್ಯವಿದೆ.

4. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ ಮತ್ತು ರಕ್ತಹೀನತೆಯು ಅನೇಕ ಇತರ ಕಾಯಿಲೆಗಳಿಗೆ ಕಾರಣವಾಗಬಹುದು.