ಭಾರತದ ಅವಿಭಾಜ್ಯ ಅಂಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತೀಯರಿಗೆ ಮರೆಯುವಂತೆ ಮಾಡಲಾಯಿತು !

ಕಾಂಗ್ರೆಸ್ಸಿನ ಹೆಸರನ್ನು ಹೇಳದೇ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರಿಂದ ಟೀಕೆ !

ಕಟಕ (ಒಡಿಶಾ) – ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಅದು ಭಾರತದಿಂದ ಬೇರೆ ಎಂದಿಗೂ ಆಗಿರಲಿಲ್ಲ; ಆದರೆ ಜನರಿಗೆ ಇದನ್ನು ಮರೆಯುವಂತೆ ಮಾಡಿದರು, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಪ್ರತಿಪಾದಿಸಿದರು. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮುಂಬರುವ ಕಾಲದಲ್ಲಿ ಭಾರತ ಸರಕಾರವು ಯಾವ ಪಾತ್ರವನ್ನು ನಿರ್ವಹಿಸುವುದು ? ಎಂದು ಅವರಿಗೆ ಕೇಳಿದಾಗ ಅವರು ಮೇಲಿನಂತೆ ಉತ್ತರಿಸಿದರು.

ವಿದೇಶಾಂಗ ಸಚಿವರು ಮಾತನ್ನು ಮುಂದುವರೆಸುತ್ತಾ,

1. ಭಾರತೀಯ ಸಂಸತ್ತಿನ ಠರಾವಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ ಎಂದು ಹೇಳಿದೆ.

2. ನಿಮ್ಮ ಮನೆಗೆ ಜವಾಬ್ದಾರಿಯುತ ರಕ್ಷಕರು ಯಾರೂ ಇಲ್ಲದಿದ್ದಾರೆ, ಹೊರಗಿನವರು ಯಾರಾದರೂ ಬಂದು ಕಳ್ಳತನ ಮಾಡುತ್ತಾರೆ. ಸ್ವಾತಂತ್ರ್ಯದ ಪ್ರಾರಂಭದ ಕಾಲಾವಧಿಯಲ್ಲಿ ಭಾರತವು ಈ ಪ್ರದೇಶವನ್ನು ಖಾಲಿ ಮಾಡುವಂತೆ ಪಾಕಿಸ್ತಾನಕ್ಕೆ ಹೇಳಲಿಲ್ಲ. ಇದರಿಂದಲೇ ಈ ದುಃಖದಾಯಕ ಪರಿಸ್ಥಿತಿ ಹಾಗೆಯೇ ಮುಂದುವರೆಯಿತು.

3. ಕಾಶ್ಮೀರ ಒಂದು ಸಮಸ್ಯೆಯಾಗಿತ್ತು ಏಕೆಂದರೆ ಎಲ್ಲಿಯವರೆಗೆ ಕಲಂ 370 ಇತ್ತೋ, ಅಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆ ಮಿತಿಮೀರಿತ್ತು. ಇದರಿಂದಾಗಿ ಅಲ್ಲಿ ಹಿಂಸಾಚಾರಕ್ಕೆ ಬೆಂಬಲ ಸಿಗುತ್ತಿತ್ತು.

4. ಮೇ 5 ರಂದೇ ರಕ್ಷಣಾ ಸಚಿವ ರಾಜನಾಥ ಸಿಂಗ ಅವರು, ‘ಭಾರತದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದುಕೊಳ್ಳುವ ಅಗತ್ಯವಿಲ್ಲ’ ಎಂದು ಹೇಳಿದ್ದರು. ‘ಅಲ್ಲಿಯ ಜನರೇ ತಾವಾಗಿಯೇ ಭಾರತತದ ಭಾಗವಾಗಲು ಇಚ್ಛಿಸುತ್ತಿದ್ದಾರೆ’ ಎಂದೂ ಅವರು ಹೇಳಿದ್ದರು. ತದನಂತರ ಈಗ ವಿದೇಶಾಂಗ ಸಚಿವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

ಭಾರತಕ್ಕೆ ದ್ರೋಹ ಬಗೆಯುವ ಇಂತಹ ಕಾಂಗ್ರೆಸ್ಸಿಗೆ ಈಗ ಭಾರತಿಯರೇ ಅದರ ಸ್ಥಾನವನ್ನು ತೋರಿಸುವರು. ಇದು ಖಚಿತ