ಪಾಲಿ (ರಾಜಸ್ಥಾನ)ಯಲ್ಲಿ ಮೌಲ್ವಿಯಿಂದ 19 ವರ್ಷದ ಹುಡುಗಿಯನ್ನು ಮಸೀದಿಗೆ ಕರೆದೊಯ್ದು ಬಲಾತ್ಕಾರ

ಪಾಲಿ (ರಾಜಸ್ಥಾನ) – ಇಲ್ಲಿನ ಆದಿವಾಸಿ ಪಾಲಿ ಉಪವಿಭಾಗದ ನಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 19 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಒಂದು ಮಸೀದಿಯ ಮೌಲ್ವಿಯು ಹುಡುಗಿಗೆ ಕೆಲಸದ ನೆಪಮಾಡಿ ಮಸೀದಿಗೆ ಕರೆಸಿ ಅವಳ ಮೇಲೆ ಬಲಾತ್ಕಾರ ಮಾಡಿದನು. ಹುಡುಗಿಯು ಮನೆಗೆ ಬರದೇ ಇದ್ದಾಗ ಕುಟುಂಬದವರು ಹುಡುಕಲು ಪ್ರಾರಂಭಿಸಿದರು. ಕುಟುಂಬದವರು ಮಸೀದಿಗೆ ತಲುಪಿದಾಗ ಅವರಿಗೆ ಮೌಲ್ವಿಯು ಹುಡುಗಿಯೊಂದಿಗೆ ಒಂದು ಕೊಠಡಿಯೊಳಗೆ ಇರುವುದು ಅವರಿಗೆ ಕಂಡು ಬಂದಿತು. ಆಕ್ರೋಶಗೊಂಡ ಕುಟುಂಬದವರು ಮೌಲ್ವಿಯ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ನೀಡಿದ ನಂತರ ದೂರು ದಾಖಲಿಸಲಾಯಿತು.

19 ವರ್ಷದ ಸಂತ್ರಸ್ತೆಯು ದೂರಿನಲ್ಲಿ, ಮೌಲ್ವಿ ಅಬ್ದುಲ ಗನಿಯು ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಮೇ 2 ರಂದು ಮಧ್ಯಾಹ್ನ ಮೌಲ್ವಿ ಮನೆಗೆ ಬಂದಾಗ ಸಂತ್ರಸ್ಥೆಗೆ ಮೇ 3 ಸಾಯಂಕಾಲ `ಒಂದು ಕೆಲಸವಿದೆ’ ಎಂದು ಹೇಳಿ ಮಸೀದಿಗೆ ಬರಲು ಹೇಳಿದ. ಅವಳು ಮಸೀದಿಗೆ ಹೋದಾಗ ಮೌಲ್ವಿಯು ಅವಳನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು. ಕುಟುಂಬದವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಹೇಳಿದಳು.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಶರಿಯತ ಕಾನೂನಿನ ಪ್ರಕಾರ ಮರಣದಂಡನೆಯ ಶಿಕ್ಷೆ ನೀಡುವಂತೆ ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು !