-
ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ
-
ಧಾರವಾಡದಲ್ಲಿ ಲವ್ ಜಿಹಾದ್ !
-
ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹುಸೇನ್ ಕಾಲಿಗೆ ತಗುಲಿದ ಗುಂಡು !
ಧಾರವಾಡ – ಹುಬ್ಬಳ್ಳಿ ನವನಗರ ಪ್ರದೇಶದ ಸದ್ದಾಂ ಹುಸೇನನನ್ನು ಅಪ್ರಾಪ್ತ ದಲಿತ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅವನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಮೇ 3ರಂದು ಅವನು ಇಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹುಸೇನ್ ಕಾಲಿಗೆ ಗುಂಡು ತಗುಲಿದೆ. ಈ ಘಟನೆಯಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ನಿರೀಕ್ಷಕ ಸಂಗಮೇಶ ಬಿಡಿಗಿನಾಳ್ ಗಾಯಗೊಂಡಿದ್ದಾರೆ.
19 ವರ್ಷದ ಹುಸೇನ್ ಮೊದಲು ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿ ಬಳಿಕ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು. ನಂತರ ಆಕೆಯ ಬಲಾತ್ಕಾರ ಮಾಡಿ, ಅವಳನ್ನು ಬೆದರಿಸಿದ್ದಾನೆ. ಬಲಾತ್ಕಾರದಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಸತ್ಯ ಹೊರಬಂದಿದೆ. ಹುಸೇನ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಸಂಪಾದಕೀಯ ನಿಲುವು
|