2020 ರಲ್ಲಿ, ಆಸ್ಟ್ರೇಲಿಯಾ ಇಬ್ಬರು ಭಾರತೀಯ ಗೂಢಚಾರರನ್ನು ದೇಶದಿಂದ ಹೊರಹಾಕಿತು ! – ‘ಎಬಿಸಿ ನ್ಯೂಸ್’ ಹಕ್ಕು

ಆಸ್ಟ್ರೇಲಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಆರ್ಗನೈಸೇಶನ್ (ASIO) ಮುಖ್ಯಸ್ಥ ಮೈಕ್ ಬರ್ಗೆಸ್

ಕ್ಯಾನಬೆರಾ (ಆಸ್ಟ್ರೇಲಿಯಾ) – 2020 ರಲ್ಲಿ ಆಸ್ಟ್ರೇಲಿಯಾ ಇಬ್ಬರು ಭಾರತೀಯ ಗೂಢಚಾರರನ್ನು ಹೊರಹಾಕಿದೆ ಎಂದು ಆಸ್ಟ್ರೇಲಿಯಾದ ಸುದ್ದಿ ವಾಹಿನಿ ‘ಎಬಿಸಿ ನ್ಯೂಸ್’ ಹೇಳಿಕೊಂಡಿದೆ. ಇದನ್ನು ‘ದಿ ಆಸ್ಟ್ರೇಲಿಯನ್’ ಮತ್ತು ‘ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಕೂಡ ಈ ವರದಿಯನ್ನು ಪ್ರಸಾರ ಮಾಡಿದೆ. ಭಾರತೀಯ ಗೂಢಚಾರರು ಆಸ್ಟ್ರೇಲಿಯಾದ ರಕ್ಷಣಾ ಯೋಜನೆಗಳು ಮತ್ತು ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಕದಿಯಲು ಪ್ರಯತ್ನಿಸಿದ್ದಾರೆ ಎಂದು ಈ ವರದಿಯಲ್ಲಿ ಹೇಳಿದೆ. ಈ ಷಡ್ಯಂತ್ರದ ಹಿಂದೆ ಭಾರತದ ಗುಪ್ತಚರ ಸಂಸ್ಥೆ ‘ರಾ’ ಅಧಿಕಾರಿಗಳ ಕೈವಾಡವಿತ್ತು. ಈ ಪ್ರಕರಣ ಬೆಳಕಿಗೆ ಬಂದ ನಂತರ ಭಾರತೀಯ ಗೂಢಚಾರರನ್ನು ಬಂಧಿಸಿ ದೇಶದಿಂದ ಹೊರಹಾಕಲಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

‘ಆಸ್ಟ್ರೇಲಿಯಾದ ಗುಪ್ತಚರ ಸಂಸ್ಥೆಯ ನಿರ್ದೇಶಕರಾದ ಮೈಕ ಬರ್ಗೆಸ ಅವರು ಈ ಸಂಕೇತವನ್ನು ನೀಡಿದ್ದರೆಂದು 2021 ರ ವಾರ್ಷಿಕ ಅಪಾಯದ ವರದಿಯಲ್ಲಿ ನಮೂದಿಸಿದ್ದರು; ಆದರೆ ಈ ಗೂಢಚಾರರು ಯಾವ ದೇಶದವರು? ಎನ್ನುವುದನ್ನು ಹೇಳಿರಲಿಲ್ಲ.

ಭಾರತದೊಂದಿಗೆ ನಮ್ಮ ಉತ್ತಮ ಸ್ನೇಹವನ್ನು ಹೊಂದಿದ್ದು, ಈ ವಿಷಯದಲ್ಲಿ ನಾವು ಸಿಲುಕಲು ಬಯಸುವುದಿಲ್ಲ ! – ಆಸ್ಟ್ರೇಲಿಯಾ ಸರಕಾರ

ಈ ವಿಷಯದಲ್ಲಿ ಆಸ್ಟ್ರೇಲಿಯಾ ಸರಕಾರದ ಹಿರಿಯ ಸಚಿವ ಜಿಮ್ ಚಾಲಮರ್ಸ್ ಅವರು, ನಾವು ಈ ವಿಷಯದಲ್ಲಿ ಸಿಲುಕಿ ಕೊಳ್ಳಲು ಬಯಸುವುದಿಲ್ಲ. ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಎರಡೂ ದೇಶಗಳ ಪ್ರಯತ್ನಗಳಿಂದ ನಮ್ಮ ಸಂಬಂಧ ಚೆನ್ನಾಗಿದೆ. ಮತ್ತೊಂದೆಡೆ, ಈ ವಿಷಯದಲ್ಲಿ ಭಾರತ ಇನ್ನೂ ಅಧಿಕೃತ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ.

ಸಂಪಾದಕೀಯ ನಿಲುವು

ಭಾರತದಲ್ಲಿ ಆಗುತ್ತಿರುವ ಕ್ಷಿಪ್ರ ಭೌತಿಕ ಪ್ರಗತಿ, ಹಾಗೆಯೇ ಹಿಂದೂ ಪುನರುಜ್ಜೀವನದ ಕಾರ್ಯ ಇಂದು ಪ್ರಪಂಚದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗೆ ಅಸೂಯೆ ಉಂಟಾಗುತ್ತದೆ ! ಇಂತಹ ಹೇಳಿಕೆ ನಿರಾಶೆಯಿಂದ ಹೇಳಲಾಗುತ್ತಿದೆ ಎಂದು ತಿಳಿಯಿರಿ !